ಮಯನ್ಮಾರ್‌ನಲ್ಲಿ ಹೆಚ್ಚಾದ ಸಂಘರ್ಷ: ನಾಗರಿಕರ ಮಾರಣಹೋಮ!

masthmagaa.com:

ಪಕ್ಕದ ಮಯನ್ಮಾರ್‌ನಲ್ಲಿ ಮಿಲಟರಿ ಸರ್ಕಾರದ ವಿರುದ್ದ ಸಂಘರ್ಷಗಳು ಜೋರಾಗ್ತಿರೊ ಪರಿಣಾಮ ಹೆಚ್ಚಿನ ನಾಗರಿಕರು ಸಾವನ್ನಪ್ತಿದ್ದಾರೆ ಅಂತ ಗೊತ್ತಾಗಿದೆ. ಅಲ್ಲಿನ ಮಿಲಟರಿ ಸರ್ಕಾರದ ವಿರುದ್ದ ಸಮರ ಸಾರ್ತಿರೊ ಬಂಡಾಯ ಗುಂಪುಗಳ ಕಾದಾಟದಲ್ಲಿ ಕಳೆದ ಏಳು ತಿಂಗಳಲ್ಲಿ ಕನಿಷ್ಠ ಸಾವಿರಕ್ಕೂ ಅಧಿಕ ನಾಗರಿಕರು ಬಲಿಯಾಗಿದ್ದಾರೆ ಅಂತ ವರದಿಯಾಗಿದೆ. ಅಲ್ದೇ 3 ವರ್ಷಗಳ ಹಿಂದೆ ಮಿಲಟರಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿವರೆಗೆ ಮಯನ್ಮಾರ್‌ನಲ್ಲಿ ಸುಮಾರು ಐದು ಸಾವಿರ ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply