ಇನ್ಮುಂದೆ ಇ- ಪಾಸ್‌ಗಾಗಿ ಸುಪ್ರೀಂಕೋರ್ಟ್‌ ಮುಂದೆ ನಿಲ್ಲೋಹಾಗಿಲ್ಲ! ಆನ್‌ಲೈನ್‌ ಪೋರ್ಟ್‌ಲ್‌ ಲಾಂಚ್‌ ಮಾಡಿದ ಸಿಜೆಐ!

masthmagaa.com:

ಸುಪ್ರೀಂಕೋರ್ಟ್‌ಗೆ ಪ್ರವೇಶಿಸಲು ಇ-ಪಾಸ್‌ ಪಡೆಯಲು ʻಸುಸ್ವಾಗತಂ’ ಅನ್ನೊ ಪೋರ್ಟಲ್ ಒಂದನ್ನ ಪ್ರಾರಂಭಿಸಲಾಗಿದೆ. ಈ ಬಗ್ಗೆ ಸಿಜೆಐ ಚಂದ್ರಚೂಡ್ ಮಾಹಿತಿ ನೀಡಿದ್ದಾರೆ. ಸುಸ್ವಾಗತಂ ವೆಬ್ ಆಧಾರಿತ ಮತ್ತು ಮೊಬೈಲ್ ಸ್ನೇಹಿ ಆಪ್ ಆಗಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಲು ಹಾಗು ವಕೀಲರನ್ನು ಭೇಟಿ ಮಾಡುವ ವಿವಿಧ ಉದ್ದೇಶಗಳಿಗೆ ಬಳಕೆದಾರರು ಆನ್ಲೈನ್‌ನಲ್ಲಿ ರಿಜಸ್ಟರ್‌ ಅಗಲು ಮತ್ತು ಇ- ಪಾಸ್ ಪಡೆಯಲು ಉಪಯೋಗವಾಗಲಿದೆ ಅಂತ ಸಿಜೆಐ ಹೇಳಿದ್ದಾರೆ. ಇನ್ನುಈ ಪೋರ್ಟಲ್‌ನ್ನ ಜುಲೈ 25, 2023 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ದೆ ಆಗಸ್ಟ್ 9ರವರೆಗೆ ಪ್ರಾಯೋಗಿಕವಾಗಿ 10 ಸಾವಿರಕ್ಕೂ ಹೆಚ್ಚು ಇ-ಪಾಸ್‌ಗಳನ್ನು ಪೋರ್ಟಲ್ ಮೂಲಕ ವಿತರಿಸಲಾಗಿದೆ ಅಂತ ಸಿಜೆಐ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply