ಅಮುಲ್‌ Vs ನಂದಿನಿ, ಹಾಲಿನ ವಿಚಾರದಲ್ಲಿ ಕೋಲಾಹಲ!

masthmagaa.com:

ರಾಜ್ಯದಲ್ಲಿ ಗುಜರಾತ್‌ನ ಅಮುಲ್‌ ಹಾಗೂ KMFನ ನಂದಿನಿ ನಡುವಿನ ಸಮರ ಜೋರಾಗಿದೆ. ಬೆಂಗಳೂರಿನಲ್ಲಿ ಅಮುಲ್‌ ಉತ್ಪನ್ನಗಳ ಮಾರಾಟದ ಹಿನ್ನಲೆ ವಿರೋಧ ಪಕ್ಷಗಳು, ಕನ್ನಡಿಗರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕ್ತಿದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಅಮುಲ್‌ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡ್ತಿದೆ ಅಂತ ಆರೋಪಿಸಿದ್ದಾರೆ. ಅಮುಲ್‌ ಬ್ರ್ಯಾಂಡ್‌ ವಿಚಾರವಾಗಿ ಯಾರೂ ಆತಂಕ ಪಡಬೇಕಿಲ್ಲ. ನಂದಿನಿ ಉತ್ಪನ್ನಗಳ ವೃದ್ಧಿಗೆ ಮತ್ತಷ್ಟು ಕ್ರಮಕೈಗೊಳ್ತೀವಿ ಅಂತ ಭರವಸೆ ನೀಡಿದ್ದಾರೆ. ಇತ್ತ ಆರೋಗ್ಯ ಸಚಿವ ಸುಧಾಕರ್‌ ಮಾತನಾಡಿ, ನಂದಿನಿ ಹಾಲನ್ನ ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆಗೆ, ಮಹಾರಾಷ್ಟ್ರಕ್ಕೆ ನಮ್ಮ ಹಾಲು ಪೂರೈಕೆಯಾಗ್ತಿದೆ. ಇತರೆ ಬ್ರ್ಯಾಂಡ್‌ಗಳ ಹಾಲುಗಳನ್ನ ರಾಜ್ಯದಲ್ಲಿ ಹಿಂದಿನಿಂದಲೂ ಮಾರಾಟ ಮಾಡ್ತಿದಾರೆ. ಅಮುಲ್‌ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ? ಅಂತ ಪ್ರಶ್ನಿಸಿದ್ದಾರೆ. ಈ ರೀತಿ ರಾಜಕೀಯ ಮಾಡೋದನ್ನ ಬಿಡಬೇಕು ಅಂತ ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ಕಿಡಿಕಾರಿದ್ದಾರೆ. ಇತ್ತ ಈ ಬಗ್ಗೆ ಪ್ರತಿಕ್ರಿಯಿಸಿರೊ ಅಮುಲ್‌ ಕಂಪನಿ ಎಂಡಿ, ಮುಂದಿನ ವಾರ ಅಮುಲ್‌ ಕ್ವಿಕ್‌ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಆರಂಭವಾಗಲಿದೆ. ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹಾಲು, ಮೊಸರು ಸರಬರಾಜು ಆಗಲಿದೆ. ನಂದಿನಿ ಅಥ್ವಾ ಕರ್ನಾಟಕದ ಜೊತೆ ಪೈಪೋಟಿ ನಡೆಸಲ್ಲ ಅಂತ ಹೇಳಿದ್ದಾರೆ. ಜೊತೆಗೆ ಅಮುಲ್‌ ಹಾಗೂ ನಂದಿನಿ ಸಂಬಂಧ ಚೆನ್ನಾಗಿದೆ. ನಂದಿನಿ ಹಾಲಿನ ಮಳಿಗೆ ರೀತಿ ನಾವು ಸ್ಟಾಲ್‌ ಅಥ್ವಾ ಮಿಲ್ಕ್‌ ಬೂತ್‌ ಹಾಕಲ್ಲ. ಯಾರಿಗೆ ಅಮುಲ್‌ ಉತ್ಪನ್ನ ಬೇಕೋ ಅವ್ರು ಇ-ಕಾಮರ್ಸ್‌ ಮೂಲಕ ಖರೀದಿ ಮಾಡಬಹದು. ಬೆಂಗಳೂರಿನಿಂದ 100 ಕಿಮೀ ದೂರದ ಮದನಪಲ್ಲಿಯಲ್ಲಿ ಅಮುಲ್‌ ಪ್ಲ್ಯಾಂಟ್‌ ಇದೆ. ಅಲ್ಲಿಂದ ಸಪ್ಲೈ ಮಾಡ್ತೇವೆ ಹೊರತು ಮಳಿಗೆಗಳನ್ನ ಹಾಕಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಇತ್ತ ಇ-ಕಾಮರ್ಸ್‌ ಮೂಲಕ ಅಮುಲ್‌ ಉತ್ಪನ್ನಗಳ ಮಾರಾಟಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇ-ಕಾಮರ್ಸ್‌ ಅಡಿಯಲ್ಲಿ ಅಮುಲ್ ಹಾಲು ಮೊಸರು ಮಾರಾಟಕ್ಕೆ ಮುಂದಾದ್ರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಈ ಸಂಸ್ಥೆಗಳು ಅಮುಲ್‌ ಮಾರಾಟ ನಿಲ್ಲಿಸಬೇಕು. ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಹೊಣೆಯಾಗುತ್ತವೆ ಅಂತ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply