UCC ಪರಿಚಯಿಸಲು ಮುಂದಾದ ಅಸ್ಸಾಂ! ಉತ್ತರಾಖಂಡ ಮಾಡೆಲ್‌ಗೆ ಪ್ರತೀಕ್ಷೆ!

masthmagaa.com:

ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಅಥ್ವಾ UCCಯ ಮಾಡೆಲ್‌ನ್ನ ಇದೀಗ ಅಸ್ಸಾಂನಲ್ಲಿ ಪರಿಚಯಿಸೋಕೆ ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಮುಂದಾಗಿದ್ದಾರೆ. ಮುಂದಿನ ವಾರ ಅಸ್ಸಾಂನಲ್ಲಿ ನಡೆಯಲಿರೋ ಬಜೆಟ್‌ ಅಧಿವೇಶನದ ವೇಳೆ UCC ಬಿಲ್‌ ಇಂಟ್ರಡ್ಯುಸ್‌ ಮಾಡೋ ಸಾಧ್ಯತೆ ಇದೆ. ಹೀಗಂತ ಖುದ್ದು ಹಿಮಂತ್‌ ಬಿಸ್ವಾ ಶರ್ಮಾ ಹೇಳ್ಕೊಂಡಿದ್ದಾರೆ. ʻUCC ಸಂಬಂಧ ಉತ್ತರಾಖಂಡದಲ್ಲಿ ಆಗ್ತಿರೋ ಬೆಳವಣಿಗೆಯನ್ನ ನಾವು ಸೂಕ್ಷ್ಮವಾಗಿ ಗಮನಿಸ್ತಿದ್ದೇವೆ. ಎಲ್ಲಿಯಾದ್ರೂ ಉತ್ತರಾಖಂಡ ಫೆಬ್ರುವರಿ 5 ರಂದು UCC ಬಿಲ್‌ ಪಾಸ್‌ ಮಾಡಿದ್ರೆ, ನಂತ್ರ ನಮಗೂ ಕೂಡ ಅದನ್ನ ಇಂಪ್ಲಿಮೆಂಟ್‌ ಮಾಡೋಕೆ ಸಲೀಸಾಗುತ್ತೆ. ನಮ್ಮ ಬಜೆಟ್‌ ಅಧಿವೇಶನ ಫೆಬ್ರುವರಿ 5 ರಿಂದ ಸ್ಟಾರ್ಟ್‌ ಆಗುತ್ತೆ. ಸೋ ನಮ್ಗೆ ಇನ್ನೂ ಸ್ವಲ್ಪ ಟೈಮ್‌ ಇದೆʼ ಅಂದಿದ್ದಾರೆ. ಅಂದ್ಹಾಗೆ ಫೆಬ್ರುವರಿ 2ರಂದು 5 ಸದಸ್ಯರ ಸಮಿತಿ 749 ಪುಟಗಳ ಡ್ರಾಫ್ಟ್‌ ರೆಡಿ ಮಾಡಿ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿಗೆ ಒಪ್ಪಿಸಿದ್ರು.

-masthmagaa.com

Contact Us for Advertisement

Leave a Reply