ಐದು ವರ್ಷ ನಾನೆ ಸಿಎಂ ಎಂದ ಸಿದ್ದು; ಸಿಎಂ ಆಗೋಕೆ ಪ್ರಿಯಾಂಕ್ ಕೂಡ ರೆಡಿ!

masthmagaa.com:

ಮುಂದಿನ ಐದು ವರ್ಷ ನಮ್ದೇ ಸರ್ಕಾರ ನಾನೇ ಸಿಎಂ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿನ್ನೆ ಹೇಳಿದ್ದಾರೆ. ಮೊನ್ನೆಯಷ್ಟೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕತ್ವ ಬದಲಾವಣೆ, ಸಂಪುಟ ಪುನಃರಚನೆ ಬಗ್ಗೆ ಬಹಿರಂಗವಾಗಿ ಮಾತಾಡಿದ್ರೆ ಶಿಸ್ತುಕ್ರಮ ತಗೊತೀವಿ ಅಂತ ವಾರ್ನಿಂಗ್‌ ನೀಡಿತ್ತು. ಈ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ “ಕೆಲ್ಸ ಇಲ್ದೇ ಇರೋರು ಸಿಎಂ ಬದಲಾವಣೆ ಬಗ್ಗೆ ಮಾತಾಡ್ತಾರೆ. ಅವ್ರಿಗ್‌ ಬೇರೆ ಕೆಲ್ಸ ಇಲ್ಲ. ಅದಕ್ಕೆ ಮಾತಾಡ್ತಾರೆ. ಡಿಸಿಎಂಗಳ ವಿಚಾರ ತೀರ್ಮಾನ ಮಾಡೋದು ಹೈಕಮಾಂಡ್.‌ ಅವರ ಜೊತೆ ಚರ್ಚೆ ಆದ್ಮೇಲೆ ತೀರ್ಮಾನ ಆಗತ್ತೆ” ಅಂತೇಳಿ ತಮ್ಮದೇ ಪಕ್ಷದ ಶಾಸಕರಿಗೆ ಟಾಂಗ್‌ ನೀಡಿದ್ದಾರೆ. ಇತ್ತ ಈ ಬಗ್ಗೆ ರಿಪ್ಲೈ ಮಾಡಿರೊ ಸಚಿವ ಪ್ರಿಯಾಂಕ್‌ ಖರ್ಗೆ “ಸಿಎಂ ಅವ್ರು ತಮ್ಮ ಪರ್ಸನಲ್‌ ಅಭಿಪ್ರಾಯ ಹೇಳಿದ್ದಾರೆ ಅಷ್ಟೆ. ತೀರ್ಮಾನ ತಗೊಳ್ಳೋದು ದೆಹಲಿಯಲ್ಲಿ ಕೂತಿರೊ ನಾಲ್ಕು ಜನ. ಅವ್ರು ಸಿಎಂ ಆಗು ಅಂದ್ರೆ ನಾನು ರೆಡಿ” ಅಂದಿದ್ದಾರೆ. ಇನ್ನು ಗೃಹ ಸಚಿವ ಪರಮೇಶ್ವರ್‌ ಮಾತನಾಡಿ “ಸರ್ಕಾರ ರಚನೆ ಆದಾಗ ಏನು ತೀರ್ಮಾನ ಆಗಿದೆ ಅಂತ ಗೊತ್ತಿರೋದು ಸಿಎಂ, ಡಿಸಿಎಂ ಗೆ ಮಾತ್ರ. ಅದ್ರು ಬಗ್ಗೆ ನಾವು ಜಡ್ಜ್‌ ಮಾಡೋಕೆ ಆಗಲ್ಲ. ಸಿಎಂ ಹಾಗೆ ಹೇಳ್ತಿದ್ದಾರೆ ಅಂದ್ರೆ ಏನೋ ಅರ್ಥ ಇರ್ಬೇಕು” ಅಂದಿದ್ದಾರೆ. ಇತ್ತ ಸಿದ್ದರಾಮಯ್ಯನವರು ಯಾವಾಗ ಹುದ್ದೆ ಬಿಡ್ತಾರೆ, ಅವಾಗ ಪರಮೇಶ್ವರ್ ಸಿಎಂ ಆಗ್ತಾರೆ ಅಂತ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಪರಮೇಶ್ವರ್‌, ನಾನು ರಾಜಣ್ಣನವರಿಗೆ ಅಭಾರಿ ಆಗಿದ್ದಾನೆ. ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆಪಡುತ್ತೇನೆ” ಅನ್ನೋ ಮೂಲಕ ಸಿಎಂ ಆಗೋ ಆಸೆ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply