ಉತ್ತರ ಪ್ರದೇಶದಲ್ಲಿ ಜಗತ್ತಿನ ಮೊದಲ ರಣಹದ್ದು ಸಂರಕ್ಷಣಾ ಕೇಂದ್ರ!

masthmagaa.com:

ಜಗತ್ತಿನ ಮೊದಲ ರಣಹದ್ದು ಸಂರಕ್ಷಣಾ ಕೇಂದ್ರವನ್ನ ಉತ್ತರ ಪ್ರದೇಶದ ಗೋರಖಪುರ್‌ನಲ್ಲಿ ನಿರ್ಮಿಸಲಾಗ್ತಿದೆ. ರಣಹದ್ದುಗಳ ಜನಸಂಖ್ಯೆ ಕ್ಷೀಣಿಸುತ್ತಿರೋ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಈ ಕ್ರಮ ಕೈಗೆತ್ತಿಕೊಂಡಿದೆ. ಈ ಸಂರಕ್ಷಣಾ ಕೇಂದ್ರವನ್ನ ಸಿಎಂ ಯೋಗಿ ಅದಿತ್ಯಾನಾಥ್‌ ಸೆಪ್ಟಂಬರ್‌ 3 ರಂದು ಉದ್ಘಾಟಿಸಲಿದ್ದಾರೆ. ಈ ಕೇಂದ್ರದ ನಿರ್ಮಾಣಕ್ಕೆ ಒಟ್ಟು 1.06 ಕೋಟಿ ರೂಪಾಯಿಯನ್ನ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಮೊದಲು 2021ರಲ್ಲಿ ಕೆಂಪು ತಲೆಯ ರಣಹದ್ದುಗಳ ಸಂರಕ್ಷಣಾ ಕೇಂದ್ರದ ಯೋಜನೆಗೆ 80 ಲಕ್ಷ ರೂಪಾಯಿಯನ್ನ ಬಿಡುಗಡೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply