ಇಸ್ರೇಲ್‌ ಜೊತೆಗಿನ ಸಂಬಂಧ ಮುರಿಯಲು ಮುಂದಾದ ಕೊಲಂಬಿಯಾ!

masthmagaa.com:

ಗಾಜಾ ಮೇಲೆ ಯುದ್ಧ ತೀವ್ರಗೊಳಿಸಿರೋ ಇಸ್ರೇಲ್‌ ವಿರುದ್ದ ಬಹುತೇಕ ರಾಷ್ಟ್ರಗಳು ಅಸಮಧಾನ ವ್ಯಕ್ತಪಡಿಸಿವೆ. ಇದೀಗ ಕೊಲಂಬಿಯಾ ಇಸ್ರೇಲ್‌ ವಿರುದ್ಧ ಹೇಳಿಕೆ ನೀಡೋದು ಮಾತ್ರವಲ್ಲದೇ…ಅದ್ರ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನ ಕೂಡ ಮುರಿಯೋಕೆ ಮುಂದಾಗಿದೆ….ಹೀಗಂತ ಖುದ್ದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ. ʻಇಸ್ರೇಲ್‌ನಲ್ಲಿ ನರಮೇಧ ನಡೆಸೋ ಸರ್ಕಾರವಿದೆ…ಆದ್ರಿಂದ ನಾಳೆನೇ ನಾವು ಇಸ್ರೇಲ್‌ನೊಂದಿಗಿನ ರಾಜತಾಂತ್ರಿಕ ಸಂಬಂಧ ಬ್ರೇಕ್‌ ಮಾಡ್ತೀವಿʼ ಅಂತೇಳಿದ್ದಾರೆ. ಇನ್ನು ಪೆಟ್ರೋ ಅವ್ರ ಈ ನಿರ್ಧಾರಕ್ಕೆ ಇಸ್ರೇಲ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಇಸ್ರೇಲ್‌ ಕಾಟ್ಜ್‌ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ʻಕೊಲಂಬಿಯಾ ಅಧ್ಯಕ್ಷ ಪೆಟ್ರೋ, ಯಹೂದಿ ವಿರೋಧಿ…ಅವ್ರಲ್ಲಿ ಬರೀ ದ್ವೇಷ ತುಂಬ್ಕೊಂಡಿದೆ. ಪೆಟ್ರೋ ಅವ್ರ ಈ ನಿಲುವಿಂದ ಹಮಾಸ್‌ ಸಂಘಟನೆಗೆ ಬೆಂಬಲ ಸೂಚಿಸಿದಂತಾಗಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply