ಭಾರತವನ್ನ ಪಶ್ಚಿಮ ದೇಶಗಳು ಲೂಟಿ ಮಾಡಿದ್ದವು ಅಂತ ರಷ್ಯಾ ಅಧ್ಯಕ್ಷ ಪುಟಿನ್‌ ವಾಗ್ದಾಳಿ!

masthmagaa.com:

ಯುಕ್ರೇನ್ ಯುದ್ದದಲ್ಲಿ ಗೆದ್ದ ಪ್ರದೇಶಗಳನ್ನ ಅಧಿಕೃತವಾಗಿ ಸೇರಿಸಿಕೊಂಡು ರಷ್ಯಾ ಅಧ್ಯಕ್ಷ ಪುಟಿನ್‌, ಬಳಿಕ ಭಾಷಣ ಮಾಡಿದ್ದಾರೆ. ಈ ವೇಳೆ ಭಾರತವನ್ನೂ ಉಲ್ಲೇಖಿಸಿ ಪಶ್ಚಿಮ ರಾಷ್ಟ್ರಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪಶ್ಚಿಮ ದೇಶಗಳು, ಮಧ್ಯಯುಗದಲ್ಲಿ ತಮ್ಮ ವಸಾಹತುಶಾಹಿ ನೀತಿಯನ್ನು ಪ್ರಾರಂಭ ಮಾಡಿದ್ವು. ಬೇರೆ ದೇಶಗಳ ಜನರನ್ನ ಗುಲಾಮರನ್ನಾಗಿ ಮಾಡಿಕೊಂಡವು. ಅಮೆರಿಕಾದಲ್ಲಿ ಬುಡಕಟ್ಟು ಜನಾಂಗದವರ ನರಮೇಧ ಮಾಡಿದ್ರು, ಭಾರತ, ಆಫ್ರಿಕಾದಲ್ಲಿ ಲೂಟಿ ಮಾಡಿದ್ರು. ಚೀನಾ ವಿರುದ್ಧ ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳು ಯುದ್ದ ಮಾಡಿದ್ವು. ಎಲ್ಲ ರಾಷ್ಟ್ರಗಳನ್ನ ನಶಾ ದಾಸರನ್ನಾಗಿ ಮಾಡಿದ್ರು, ಆ ಜನಾಂಗಗಳನ್ನ ಉದ್ದೇಶಪೂರ್ವಕವಾಗಿ ನಿರ್ನಾಮ ಮಾಡೋಕೆ ಪ್ರಯತ್ನ ಮಾಡಿದ್ರು ಅಂತ ಅಕ್ರೋಶ ಹೊರಹಾಕಿದ್ದಾರೆ. ʻರಾಜಕೀಯ ಲಾಭಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಯಾವುದೇ ದೇಶದಲ್ಲಿ ವರ್ಣನೀತಿಯನ್ನ ಪ್ರಚೋದಿಸುತ್ತಿವೆ, ‘ಸತ್ಯ, ಸ್ವಾತಂತ್ರ್ಯ ಮತ್ತು ನ್ಯಾಯ’ದ ಮೌಲ್ಯಗಳಿಗೆ ವಿರುದ್ಧವಾಗಿ ಭಾರತದಂತಹ ದೇಶಗಳನ್ನ ಲೂಟಿ ಮಾಡಿದೆ ಅಂತ ಹರಿಹಾಯ್ದಿದ್ದಾರೆ. ಅಲ್ದೇ ರಷ್ಯಾವನ್ನ ತಮ್ಮ ಅಧೀನ ರಾಷ್ಟ್ರವನ್ನಾಗಿ ಮಾಡಿಕೊಳ್ಳೋಕೆ, ವಸಾಹತುವನ್ನಾಗಿ ಮಾಡೋಕೆ ಅವರು ಇಷ್ಟಪಡ್ತಿದ್ದಾರೆ. ಹೀಗಾಗಿ ಇಂತಹ ಕ್ರಮಗಳು ನಮ್ಮ ಜನರ ರಕ್ಷಣೆ ಮಾಡುತ್ತವೆ ಅಂತ ಪುಟಿನ್‌ ಹೇಳಿದ್ದಾರೆ. ಇದೇ ವೇಳೆ ನಾವು ಮತ್ತೆ ಸೋವಿಯತ್‌ ಕಟ್ಟೋಕೆ ಹೋಗ್ತಿಲ್ಲ ಅಂತ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply