ಬಿಗ್‌ಬಾಸ್‌ನ ಮೊದಲ ಕಂಟೆಸ್ಟಂಟ್‌ ಹೆಸರನ್ನ ರಿವೀಲ್‌ ಮಾಡಿದ ಕಲರ್ಸ್‌ ಕನ್ನಡ !

masthmagaa.com:

ಕಿಚ್ಚ ಸುದೀಪ್‌ ಅವರು ನಡೆಸಿಕೊಡುವ ಬಿಗ್‌ಬಾಸ್‌ಗೆ ತುಂಬಾ ಜನ ಕಾಯ್ತಾ ಇದ್ದಾರೆ. ಬಿಗ್‌ಬಾಸ್‌ಗೆ ಕೆಲವೇ ಕೆಲವು ದಿನಗಳು ಮಾತ್ರ ಇದೆ. ಕಲರ್ಸ್‌ ಕನ್ನಡ ಒಫಿಷಿಯಲ್‌ ಆಗಿ ಅನೌನ್ಸ್‌ ಕೂಡ ಮಾಡಿದೆ. ಬಿಗ್‌ಬಾಸ್‌ ಬರ್ತಾ ಇದೆ ಅಂದಮೇಲೆ ಕಂಟೆಸ್ಟಂಟ್‌ಗಳು ಯಾರೆಲ್ಲಾ ಬರಬಹುದು ಅನ್ನೋ ಕುತೂಹಲ ಕೂಡ ಜನರಲ್ಲಿ ಇದೆ. ಸೋ ಈಗ ಕಲರ್ಸ್‌ ಕನ್ನಡದಲ್ಲಿ ಬರ್ತಾ ಇರುವಂತ ಬಿಗ್‌ಬಾಸ್‌ ಸಿಸನ್‌ 10ಕ್ಕೆ ಬರ್ತಾ ಇರುವಂತ ಮೊದಲ ಕಂಟೆಸ್ಟಂಟ್‌ ಯಾರು ಅನ್ನೋದು ರಿವೀಲ್‌ ಆಗಿದೆ. ಇದನ್ನ ಕಲರ್ಸ್‌ ಕನ್ನಡ ತನ್ನ ಒಫಿಷಿಯಲ್‌ ಪೇಜ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

“ಬೆಸ್ಟ್ ರೇಟೆಡ್ ಚಲನ ಚಿತ್ರ – 777 ಚಾರ್ಲಿ ಸಿನಿಮಾದ ಚಾರ್ಲಿ ಬಿಗ್ ಬಾಸ್ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಭಿನಂದನೆಗಳು ಚಾರ್ಲಿ” ಅಂತ ಕಲರ್ಸ್​ ಕನ್ನಡ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಅನೌನ್ಸ್‌ ಮಾಡಿದೆ. ಹಾಗಾದ್ರೆ ಚಾರ್ಲಿ ಅಂದ್ರೆ ಯಾರು ? ಅನ್ನೋದು ಇಲ್ಲಿರೋ ಪ್ರಶ್ನೆ. ಯಾಕಂದ್ರೆ ಆ ಸಿನಿಮಾದ ನಿಜವಾದ ಚಾರ್ಲಿಯನ್ನ ಅಂದ್ರೆ ನಾಯಿಯನ್ನ ಬಿಗ್‌ಬಾಸ್‌ಗೆ ಕರೆತರೋಕೆ ಸಾಧ್ಯ ಇಲ್ಲ. ಸೋ ಚಾರ್ಲಿ ಅಂದ್ರೆ ಯಾರಿರಬಹುದು ಅನ್ನೋದು ಅಭಿಮಾನಿಗಳ ಯಕ್ಷ ಪ್ರಶ್ನೆ ಅಂತಾನೇ ಹೇಳಬೋದು.

-masthmagaa.com

Contact Us for Advertisement

Leave a Reply