ಕಾಮನ್‌ವೆಲ್ತ್‌ ಗೇಮ್ಸ್‌ 2022: 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ಭಾರತ

masthmagaa.com:

2022ರ ಕಾಮನ್‌ವೆಲ್ತ್‌ ಗೇಮ್ಸ್‌ನ ಕೊನೆಯ ದಿನದಂದು ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧೂ ಮಹಿಳೆಯರ ಸಿಂಗಲ್ಸ್‌ನಲ್ಲಿ ತಮ್ಮ ಚೊಚ್ಚಲ ಚಿನ್ನದ ಪದಕವನ್ನ ಗೆದಿದ್ದಾರೆ. ಕೆನಡದ ಮಿಚೆಲ್‌ ಲೀ ಅವ್ರ ವಿರುದ್ದ 21-15 ಹಾಗೂ 21-13 ರ ಅಂತರದಲ್ಲಿ ಸಿಂಧೂ ಗೆಲುವು ಸಾಧಿಸಿದ್ದಾರೆ. ಇತ್ತ ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿಯೂ ಭಾರತದ ಲಕ್ಷ್ಯ ಸೇನ್‌ ಚಿನ್ನದ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಸೆಟ್‌ನಲ್ಲಿ 19-21ರಿಂದ ಸೋತ ಸೇನ್‌, ಬಳಿಕ 21-9 ಹಾಗೂ
21-16ರ ಅಂತರದಿಂದ ಮಲೇಷಿಯಾದ ಜೆ ಯಾಂಗ್‌ ವಿರುದ್ದ ವಿಜಯ ಸಾಧಿಸಿದ್ದಾರೆ. ಜೊತೆಗೆ ಪುರಷರ ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಕೂಡ ಚಿನ್ನ ಪಕದಕವನ್ನ ಮುಡಿಗೇರಿಸಿಕೊಂಡಿದ್ದಾರೆ. ಪುರುಷರ ಟಿಟಿ-ಟೇಬಲ್‌ ಟೆನ್ನಿಸ್‌ನಲ್ಲಿ ಶರತ್‌ ಕಮಲ್‌ ಇಂಗ್ಲೆಂಡ್‌ನ ಲಿಯಾಮ್‌ ಪಿಚ್‌ಫೋರ್ಡ್‌ ವಿರುದ್ದ 4-1ರ ಅಂತರದಲ್ಲಿ ಗೆದ್ದು, ದೇಶಕ್ಕೆ ಮತ್ತೊಂದು ಚಿನ್ನ ಗೆದ್ದುಕೊಟ್ಟಿದ್ದಾರೆ.‌ ಇನ್ನು ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ದದ ಫೈನಲ್‌ ಪಂದ್ಯದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದೆ. ಇಲ್ಲಿ ವಿಶೇಷ ಅಂದ್ರೆ 1998 ರಿಂದ ಇಲ್ಲಿಯವರೆಗೆ ಅಂದ್ರೆ 7 ಕಾಮನ್‌ವಲ್ತ್‌ ಎಡಿಶನ್‌ಗಳಲ್ಲಿ ಪುರುಷರ ಹಾಕಿಯಲ್ಲಿ ಆಸ್ಟ್ರೇಲಿಯಾ ಚಿನ್ನದ ಪದಕವನ್ನ ಗೆದ್ದಿದೆ. ಕೊನೆಯ ದಿನದಂದು ಭಾರತ ಒಟ್ಟು 4 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನ ಬಾಚಿಕೊಂಡಿದೆ. ಇನ್ನು ಟೋಟಲ್‌ ಆಗಿ ನೋಡಿದ್ರೆ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಳನ್ನ ತನ್ನದಾಗಿಸಿಕೊಂಡು, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply