ಯುದ್ದದಲ್ಲಿ ಯುಕ್ರೇನ್‌ಗೆ ಭಾರಿ ಹಿನ್ನೆಡೆ! ರಷ್ಯಾಗೆ ಸೆರೆಸಿಕ್ಕ ಸೈನಿಕರು ಎಷ್ಟು ಗೊತ್ತಾ?

masthmagaa.com:

ರಷ್ಯಾ ಜೊತೆಗಿನ ಸಂಘರ್ಷದಲ್ಲಿ ಯುಕ್ರೇನ್‌ ಪಡೆಗೆ ದೊಡ್ಡ ಹಿನ್ನೆಡೆಯಾಗಿದೆ. ಮಾರಿಯೋಪೋಲ್‌ನಲ್ಲಿದ್ದ ಅಜೋವ್‌ಸ್ಟಾಲ್‌ ಸ್ಟೀಲ್‌ಪ್ಲಾಂಟ್‌ನಲ್ಲಿ ಸುಮಾರು 265 ಯುಕ್ರೇನ್‌ ಸೈನಿಕರು ಶರಣಾಗಿದ್ದಾರೆ ಅಂತ ರಷ್ಯಾ ಹೇಳಿದೆ. ಇದರಲ್ಲಿ 51 ಮಂದಿ ಗಂಭೀರ ಗಾಯಗೊಂಡಿದ್ದು ಅವರಿಗೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಮಾಹಿತಿ ಕೊಟ್ಟಿದೆ. ಇನ್ನು ಯುಕ್ರೇನ್‌ ಸೇನೆ ಕೂಡ ಇದನ್ನ ಒಪ್ಪಿಕೊಂಡಿದ್ದು ಸೈನಿಕರನ್ನ ಪರಸ್ಪರ ವಿನಿಮಯ ಮಾಡಿಕೊಳ್ಳೋ ಕೆಲಸ ನಡೆಯುತ್ತಿದೆ. ಯುಕ್ರೇನ್‌ ಹೀರೋಗಳು ಆದಷ್ಟು ಬೇಗ ತಮ್ಮ ತಾಯ್ನಾಡಿನ ರಕ್ಷಣೆಗೆ ಮತ್ತೆ ವಾಪಾಸ್‌ ಆಗಲಿದ್ದಾರೆ ಅಂತ ಹೇಳಿದೆ. ಇನ್ನು ಸೆರೆಸಿಕ್ಕ ಸೈನಿಕರ ಬಗ್ಗೆ ಮಾತನಾಡಿರೋ ರಷ್ಯಾ ಅಧ್ಯಕ್ಷ ಪುಟಿನ್‌ ʻಅಂತರಾಷ್ಟ್ರೀಯ ಕಾನೂನಿನ ಪ್ರಕಾರವೇ ಯುದ್ದಖೈದಿಗಳನ್ನ ನಡೆಸಿಕೊಳ್ತೀವಿʼ ಅಂತ ಹೇಳಿದ್ದಾರೆ. ಇತ್ತ ಯುಕ್ರೇನ್‌ ರಷ್ಯಾ ನಡುವಿನ ಸಮನ್ವಯಕಾರ ಲಿಯೋನಿಡ್‌ ಸ್ಟಲ್ಕಿ ಮಾತನಾಡಿದ್ದು ರಷ್ಯಾಗಾಗಿರೋ ನಷ್ಟದ ಬಗ್ಗೆ ಎಚ್ಚರಿಕೆಯಿಂದ ಯೋಚನೆ ಮಾಡ್ಬೇಕು. ನಮ್ಮ ಸೈನಿಕರನ್ನಸಹ ಅವರು ಅಮಾನವೀಯವಾಗಿ ನಡೆಸಿಕೊಳ್ತಿದ್ದಾರೆ. ಇವರ್ಯಾರು ಬದುಕೋಕೆ ಅರ್ಹರೇ ಅಲ್ಲ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply