ಹೆಚ್ಚಾಗ್ತಿರುವ ಚೀನಾ ಮಿಲಿಟರಿ ಚಟುವಟಿಕೆಗಳಿಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ!

masthmagaa.com:

ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾ ನಡುವಿನ ವಾಕ್ಸಮರ ಮುಂದುವರೆದಿದೆ. ಇದೀಗ ಏಷ್ಯಾ ಭಾಗದಲ್ಲಿ ಹೆಚ್ಚುತ್ತಿರುವ ಚೀನಾದ ಅಪಾಯಕಾರಿ ಹಾಗೂ ಬಲವಂತದ ಮಿಲಿಟರಿ ಚಟುವಟಿಕೆಗಳ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಏಷ್ಯಾದಲ್ಲಿ ಚೀನಾ ತನ್ನ ಮಿಲಿಟರಿ ಚಟುವಟಿಕೆಗಳನ್ನ ಜಾಸ್ತಿ ಮಾಡ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರ ಕುರಿತು ನಮಗೆ ಕಳವಳ ಇದೆ ಅಂತ ಸಿಂಗಾಪುರದಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಅಮೆರಿಕ ರಕ್ಷಣಾ ಸಚಿವಾಲಯ ಪೆಂಟಗನ್‌ ವಕ್ತಾರ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಉಭಯ ದೇಶಗಳ ನಡುವೆ ಬಿಕ್ಕಟ್ಟು ಹೆಚ್ಚಾಗಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕದ ವಿಮಾನಗಳು ಹಾಗೂ ಹಡಗುಗಳು ಕಾರ್ಯಾಚರಣೆ ನಡೆಸ್ಬಾರ್ದು ಅಂತ ಚೀನಾ ಹೇಳಿದೆ. ಆದ್ರೆ ಅದನ್ನ ಲೆಕ್ಕಿಸದೆ ಅಮೆರಿಕ ತನ್ನ ವಿಮಾನಗಳನ್ನ ದಕ್ಷಿಣ ಚೀನಾ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದೆ. ಇದನ್ನ ವಿರೋಧಿಸಿ ಇತ್ತೀಚೆಗೆ ಚೀನಾದ ಫೈಟರ್‌ ಜೆಟ್‌ ಅಮೆರಿಕದ ವಿಮಾನದ ಬಳಿ ಬಂದು ಇನ್ನೇನು ಡಿಕ್ಕಿ ಹೊಡೆಯುವ ರೀತಿಯಲ್ಲಿ ಪಾಸ್‌ ಅಗಿತ್ತು ಅಂತ ಅಮೆರಿಕ ಆರೋಪಿಸಿತ್ತು.

-masthmagaa.com

Contact Us for Advertisement

Leave a Reply