ಬ್ರಿಟನ್‌ ಪ್ರಧಾನಿ ಸುನಾಕ್‌ ಜೊತೆ ಮೋದಿ ಚರ್ಚಿಸಿದ್ದೇನು?

masthmagaa.com:

ಪಶ್ಚಿಮ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ, ಭದ್ರತೆ, ಸ್ಥಿರತೆ ತರುವ ಪ್ರಯತ್ನ ಮಾಡಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ‌ಜೊತೆ ಇಂದು ಫೋನ್‌ಕಾಲ್‌ನಲ್ಲಿ ಮಾತನಾಡಿದ ಮೋದಿ ಈ ಬಗ್ಗೆ X ನಲ್ಲಿ ಪೋಸ್ಟ್‌ ಹಾಕಿದ್ದಾರೆ. “ಇಂದು ಬೆಳಿಗ್ಗೆ UK PM ಸುನಾಕ್‌ ಜೊತೆ ಮಾತನಾಡಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನ ಗಟ್ಟಿ ಮಾಡೋದರ ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ನಡೀತಿರೊ ವಿದ್ಯಮಾನಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ್ವಿ. ಹಿಂಸೆ, ಭಯೋತ್ಪಾದನೆಗಳಿಗೆ ಜಾಗ ಇರಬಾರ್ದು ಅನ್ನೋದು ಇಬ್ಬರ ನಿಲುವಾಗಿದೆ. ಸಾಮಾನ್ಯ ಜನರ ಸಾವು-ನೋವುಗಳನ್ನ ಒಪ್ಪೋಕೆ ಸಾಧ್ಯವಿಲ್ಲ. ಪ್ರಾದೇಶಿಕ ಶಾಂತಿ, ಭದ್ರತೆ, ಸ್ಥಿರತೆ ತರುವ ಪ್ರಯತ್ನದ ಜೊತೆಗೆ ಮಾನವೀಯ ನೆರವು ನೀಡೊದನ್ನ ಕಂಟಿನ್ಯು ಮಾಡೋ ವಿಚಾರವಾಗಿ ಮಾತನಾಡಿದೆವು” ಅಂದಿದ್ದಾರೆ. ಅಂದ್ಹಾಗೆ ಸುನಾಕ್‌ ಭಾರತ-ಬ್ರಿಟನ್‌ ನಡುವೆ ಫ್ರೀ ಟ್ರೇಡ್‌ ಅಗ್ರೀಮೆಂಟ್‌ ಬಗ್ಗೆ ಮಾತನಾಡೋಕೆ ಭಾರತಕ್ಕೆ ಬರ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೆ ಉಭಯ ನಾಯಕರು ಇಂದು ಫೋನ್‌ ಕಾಲ್‌ನಲ್ಲಿ ಮಾತನಾಡಿದ್ದಾರೆ.

-masthmagaa.com

Contact Us for Advertisement

Leave a Reply