ಕಾಂಗ್ರೆಸ್‌- ಬಿಜೆಪಿ ಟ್ವೀಟ್‌ ವಾರ್‌: ಅಂತರ ಕಾದು ಕೊಂಡ ಸಿದ್ದರಾಮಯ್ಯ!

masthmagaa.com:

ಸಿಎಂ ಬದಲವಾವಣೆ ಕುರಿತು ರಾಜ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ಘಟಕದಲ್ಲಿ ನಡೀತಿರೋ ಟ್ವೀಟ್‌ ವಾರ್‌ ಇಂದು ಹೊಸ ರೂಪ ಪಡೆದುಕೊಂಡಿದೆ. ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್‌ ಘಟಕ ನೀಡಿದ್ದ ಟ್ವೀಟ್‌ಗಳ ಕುರಿತು ಬಿಜೆಪಿ ಹೈಕಮಾಂಡ್‌ನ ಉನ್ನತ ಮೂಲಗಳು ಪ್ರತಿಕ್ರಿಯಿಸಿದ್ದು ಇದೆಲ್ಲ ವದಂತಿ ಅಂತ ಬದಲಾವಣೆ ಸುದ್ದಿಯನ್ನ ತಳ್ಳಿಹಾಕಿದೆ. ಅಲ್ದೇ ಯಾವುದೇ ಕಾರಣಕ್ಕೂ ಬೊಮ್ಮಾಯಿಯನ್ನ ಬದಲಾಯಿಸೋದಿಲ್ಲ. ನೀವು ನಿಮ್ಮ ಕೆಲಸ ಮಾಡ್ತಿರಿ ಅಂತ ಹೇಳಿದ್ದಾರೆ ಅಂತ ಬಿಜೆಪಿ ಮೂಲಗಳು ತಿಳಿಸಿವೆ. ಇದರ ಜೊತೆಗೆ ಈ ವದಂತಿಯನ್ನ ಯಾರು ಹಬ್ಬಿಸಿದ್ದಾರೆ ಅಂತ ವರದಿ ಕೊಡಿ. ಅವರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಕೂಡ ಬೊಮ್ಮಾಯಿಗೆ ವರಿಷ್ಠರು ಸೂಚನೆ ನೀಡಿದ್ದಾರೆ ಅಂತ ಹೇಳಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಟ್ವೀಟ್‌ ಬಗ್ಗೆ ಗೊಂದಲ ಉಂಟಾಗಿದೆ ಅನ್ನೋದ್ರ ಕುರಿತು ಪ್ರತಿಕ್ರಿಯಿಸಿರೋ KPCC ಅಧ್ಯಕ್ಷ ಡಿಕೆ ಶಿವಕುಮಾರ್‌ ಇದಕ್ಕೆ ಬಿಜೆಪಿಯೇ ಮೂಲ. ಬಿಜೆಪಿ ನಾಯಕರು ಹೇಳಿಕೆ ಕೊಟ್ಟಿರೋ ಮಾಹಿತಿಯನ್ನಾಧರಿಸಿ ನಾವು ಹೇಳಿದ್ದೇವೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ್‌ ಪ್ರತಿಕ್ರಿಯಿಸಿ ಅಮಿತ್‌ ಶಾ ರಾಜ್ಯಕ್ಕೆ ಬಂದಿದ್ದು ವೀಳ್ಯದೆಲೆ ಶಾಸ್ತ್ರಕ್ಕ ಅಂತ ಪ್ರಶ್ನೆ ಮಾಡಿದ್ದಾರೆ.

ಒಂದ್ಕಡೆ ಕಾಂಗ್ರೆಸ್‌ ನಾಯಕರು ಈ ರೀತಿ ಹೇಳಿದ್ರೆ ಇತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಈ ಟ್ವೀಟ್‌ ವಾರ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜ್ಯಕ್ಕೆ ಮೂರನೇ ಸಿಎಂ ಆದ್ರೂ ಬರಲಿ ನಾಲ್ಕನೇ ಸಿಎಂ ಆದ್ರೂ ಬರಲಿ. ನಮಗೆ ಅದು ಬೇಕಿಲ್ಲ. ಯಡಿಯೂರಪ್ಪ ಚೇಂಜ್‌ ಆಗ್ತಾರೆ ಅಂತ ಗೊತ್ತಿತ್ತು. ಆದ್ರೆ ಬೊಮ್ಮಾಯಿ ಚೇಂಜ್‌ ಆಗ್ತಾರೆ ಅನ್ನೋದು ಗೊತ್ತಿಲ್ಲ ಅಂತ ಹೇಳಿದ್ದಾರೆ. ಅಲ್ದೇ ಈ ವಿಚಾರವನ್ನ ಟ್ವೀಟ್‌ ಮಾಡಿರೋ ಅವರ ಹತ್ರ ಹೋಗ್ರಿ ಕೇಳ್ರೀ. ನಾನ್‌ ಟ್ವೀಟ್‌ ಮಾಡಿದ್ದೀನಾ ಅಂತ ಹೇಳಿದ್ದಾರೆ. ಇನ್ನು ಬಿಜೆಪಿಯ ಹರ್ ಘರ್‌ ತಿರಂಗದ ಬಗ್ಗೆ ಮಾತನಾಡಿದ ಸಿದ್ದು ಆರೆಸ್ಸೆಸ್ ನಾಯಕರೇ ಈ ತ್ರಿವರ್ಣ ದ್ವಜವನ್ನ ಬೇಡ ಅಂತ ಹೇಳಿದ್ರು. ಈಗ ಬಿಜೆಪಿ ಕರೆಕೊಟ್ಟಿರೋ ಈ ಹರ್‌ಘರ್‌ ತಿರಂಗ ಅನ್ನೋದು ಡೋಂಗಿ ರಾಜಕಾರಣ ಅಂತ ಹೇಳಿದ್ದಾರೆ. ಅಲ್ದೇ RSS ನವರು ನಾಗ್ಪುರದಲ್ಲಿರೋ ಆಫೀಸ್‌ ಮೇಲೆ ತ್ರಿವರ್ಣ ಹಾರಿಸ್ತಾರಾ. ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಬಿಹಾರದ ಬೆಳವಣಿಗಳ ಬಗ್ಗೆ ಮಾತನಾಡಿ ʻನಿತೀಶ್‌ ಕುಮಾರ್‌ ಸಮಾಜವಾದಿ ಹಿನ್ನೆಲೆಯಿಂದ ಬಂದಿರೋ ನಾಯಕ, ಕೋಮುವಾದಿ ಬಿಟ್ಟು ಬಂದು ಒಳ್ಳೇ ಕೆಲಸ ಮಾಡಿದ್ದಾರೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply