ಅಕ್ಟೋಬರ್‌ 17ಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ, 19ಕ್ಕೆ ರಿಸಲ್ಟ್‌: CWC ಸಭೆಯಲ್ಲಿ ನಿರ್ಧಾರ

masthmagaa.com:

ಗಜಪ್ರಸವದಂತೆ ನಡೀತಾ ಇರೋ ಕಾಂಗ್ರೆಸ್‌ನ ಅಧ್ಯಕ್ಷ ಚುನಾವಣೆ ಪ್ರಕ್ರಿಯೆಗಳು ಇವತ್ತಿಗೆ ಒಂದು ಹಂತಕ್ಕೆ ಬಂದು ತಲುಪಿವೆ. ಕೊನೆಗೂ ಅಕ್ಟೋಬರ್‌17ರಂದು ಚುನಾವಣೆ ನಡೆಯುತ್ತೆ ಅಂತ ಕಾಂಗ್ರೆಸ್‌ನ ವರ್ಕಿಂಗ್‌ ಕಮೀಟಿ ನಿರ್ಧರಿಸಿದೆ. ಅಕ್ಟೋಬರ್‌ 19ಕ್ಕೆ ಫಲಿತಾಂಶ ಹೊರಬೀಳಲಿದೆ. ಇನ್ನು ಕಾಂಗ್ರೆಸ್‌ನಲ್ಲಿ ರಾಜಿನಾಮೆ ಪರ್ವ ಕೂಡ ಮುಂದುವರೆದಿದೆ… ತೆಲಂಗಾಣದ ರಾಜ್ಯಸಭಾ ಮಾಜಿ ಸದಸ್ಯ ಎಂಎ ಖಾನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯುವಲ್ಲಿ, ದೇಶವನ್ನು ಮುನ್ನಡೆಸುವಲ್ಲಿ ಸಾರ್ವಜನಿಕರನ್ನು ಮನವೊಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply