ನಿಹಾಂಗ್‌ ಸಿಖ್‌ಗಳ ನಡುವೆ ಹೊಡೆದಾಟ: ಓರ್ವ ಪೇದೆ ಬಲಿ, 5 ಜನ ಪೊಲೀಸರಿಗೆ ಗಾಯ!

masthmagaa.com:

ನಿಹಾಂಗ್‌ ಸಿಖ್‌ ಅನ್ನೋ ಗುಂಪು ಮತ್ತು ಪೊಲೀಸ್‌ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಕಾನ್‌ಸ್ಟೇಬಲ್‌ ಸಾವನ್ನಪ್ಪಿ, 5 ಜನ ಪೊಲೀಸರು ಗಾಯಗೊಂಡ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಇಂದು ಬೆಳಗಿನ ಜಾವದಲ್ಲಿ ಪಂಜಾಬ್‌ನ ಕಪುರ್ಥಾಲದಲ್ಲಿರೋ ಗುರುದ್ವಾರದಲ್ಲಿ ಎರಡು ನಿಹಾಂಗ್‌ ಸಿಖ್‌ ಗುಂಪುಗಳ ನಡುವೆ ಗಲಭೆ ಶುರುವಾಗಿತ್ತು. ಈ ಗಲಾಟೆ ನಿಲ್ಲಿಸೋಕೆ ಹೋದ ಪೊಲೀಸರ ಮೇಲೂ ಈ ಗುಂಪು ಹಲ್ಲೆ ನಡೆಸಿ, ಪೇದೆ ಒಬ್ರನ್ನ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಅಂದ್ಹಾಗೆ ಕಪುರ್ಥಾಲದಲ್ಲಿರೋ ಗುರುದ್ವಾರವೊಂದನ್ನ ತಮ್ಮ ಕೈವಶ ಮಾಡ್ಕೋಬೇಕು ಅಂತ ಈ ಎರಡು ಗುಂಪುಗಳ ನಡುವೆ ಕಳೆದ ಮೂರು ದಿನಗಳಿಂದ ಜಗಳ ನಡೀತಾನೇ ಇತ್ತು. ಇವ್ರ ನಡುವಿನ ಜಗಳ ನಿಲ್ಲಿಸಲು ಮತ್ತು ಜಾಸ್ತಿಯಾಗದಂತೆ ನೋಡಿಕೊಳ್ಳೋಕೆ ಪೊಲೀಸರು ಕಳೆದ ಮೂರು ದಿನಗಳಿಂದ ಗುರುದ್ವಾರದ ಬಳಿಯೇ ಇದ್ರು. ಆದ್ರೆ ಇಂದು ಬೆಳಗಿನ ಜಾವದಲ್ಲಿ ನಡೆದ ತೀವ್ರ ಗಲಾಟೆಯಲ್ಲಿ ಪಂಜಾಬ್‌ ಪೊಲೀಸರೊಬ್ರು ಬಲಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply