ಪುಲ್ವಾಮದಲ್ಲಿ ಮತ್ತೆ ಉಗ್ರರ ದಾಳಿ!

masthmagaa.com:

ಕಾಶ್ಮೀರದ ಪುಲ್ವಾಮದಲ್ಲಿ ಮತ್ತೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಪೋಲಿಸ್‌ ಸಿಬ್ಬಂದಿ ಹುತಾತ್ಮರಾಗಿ ಮತ್ತೊಬ್ಬ ಸಿಆರ್‌ಪಿಎಫ್‌ ಯೋಧ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್‌ ಮತ್ತು ಪೋಲಿಸರ ಜಂಟಿ ಪಡೆ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಶೋಪಿಯಾನ್‌ ಪ್ರದೇಶದಲ್ಲಿ ಲಷ್ಕರ್ ನಂಟು ಹೊಂದಿದ್ದ ನಸೀರ್‌ ಅಹಮದ್‌ ಭಟ್‌ ಎಂಬ ಉಗ್ರನನ್ನ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಒಂದು ಗಂಟೆಯಲ್ಲಿಯೇ ಈ ದಾಳಿ ನಡೆದಿದೆ. ಇನ್ನು ನೆನ್ನೆ ನಡೆದ ಶೋಧ ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿ ದೊರೆತ ಎಕೆ ರೈಫಲ್ಸ್‌ ಸೇರಿದಂತೆ ಮಾರಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಅಂತ ಕಾಶ್ಮೀರ ಎಡಿಜಿಪಿ ವಿಜಯ್‌ ಕುಮಾರ್‌ ಹೇಳಿದ್ದಾರೆ. ಇನ್ನು ಬಾರಾಮುಲ್ಲ ಜಿಲ್ಲೆಯಲ್ಲಿ ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಜೈಷ್-ಎ- ಮೊಹಮ್ಮದ್‌ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply