ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮನೆಮುಂದೆ ಬೀಡುಬಿಟ್ಟ ದೆಹಲಿ ಪೊಲೀಸರು! ಕಾರಣವೇನು?

masthmagaa.com:

ಭಾರತ್‌ ಜೋಡೊ ಯಾತ್ರೆ ವೇಳೆ ದೇಶದಲ್ಲಿ ಇನ್ನು ಮಹಿಳೆಯರು ಲೈಂಗಿಕ ದೌರ್ಜನ್ಯ ಅನುಭವಿಸುತ್ತಿದ್ದಾರೆ ಅಂತ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೋಲಿಸರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವ್ರ ಮನೆ ಬಳಿ ತೆರಳಿದ್ದಾರೆ. ರಾಹುಲ್‌ರನ್ನ ಸಂಪರ್ಕಿಸಿದ್ದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಮಾಹಿತಿ ನೀಡುವಂತೆ ರಾಹುಲ್‌ಗೆ ಪೊಲೀಸರು ನೋಟಿಸ್‌ ನೀಡಿದ್ರು. ಆದ್ರೆ ಇದುವರೆಗೂ ಈ ಬಗ್ಗೆ ರಾಹುಲ್‌ ಅವ್ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಲು, ಆ ಮಹಿಳೆಯರ ವಿವರಗಳನ್ನು ರಾಹುಲ್‌ರಿಂದ ತಿಳಿದುಕೊಳ್ಳಲು ಬಯಸುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ 4 ಪುಟದ ಪತ್ರವನ್ನ ದೆಹಲಿ ಪೋಲಿಸರಿಗೆ ಕಳಿಸಿದ್ದಾರೆ. ಅದ್ರಲ್ಲಿ ನಾನು ಆ ಹೇಳಿಕೆ ನೀಡಿ 45 ದಿನದ ನಂತ್ರ, ದಿಢೀರ್‌ ಅಂತ ಎರೆಡೆರಡು ಬಾರಿ ಮನೆಗೆ ಭೇಟಿ ನೀಡಿರುವ ಉದ್ದೇಶ ಏನು? ಸಂಸತ್‌ನ ಒಳಗೆ ಮತ್ತು ಹೊರಗೆ ಅದಾನಿ ವಿಚಾರ ಎತ್ತಿದ್ದಕ್ಕೆ ಈ ಅವಸರವೇ ಅಂತ ಕೇಳಿದ್ದಾರೆ. ಇನ್ನೊಂದ್‌ ಕಡೆ ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆ ಬಿಜೆಪಿ ಕೇಂದ್ರ ನಾಯಕರು ರಾಜ್ಯ ಸುತ್ತುತ್ತಿದ್ದಾರೆ. ಅದ್ರಂತೆ ಈಗ ಕಾಂಗ್ರೆಸ್‌ನ ಕೇಂದ್ರ ನಾಯಕರು ಕೂಡ ರಾಜ್ಯದತ್ತ ಮುಖ ಮಾಡಿದ್ದಾರೆ. ಭಾರತ್‌ ಜೋಡೊ ಯಾತ್ರೆ ನಂತ್ರ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾರ್ಚ್‌ 20 ಅಂದ್ರೆ ನಾಳೆ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

-masthmagaa.com

Contact Us for Advertisement

Leave a Reply