ತೋಷಖಾನಾ ಕೇಸ್‌ನಲ್ಲಿ ಇಮ್ರಾನ್‌ಗೆ ಕೊಂಚ ರಿಲೀಫ್:‌ ಆದ್ರೂ ಜೈಲೆ ಗತಿ!

masthmagaa.com:

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ಅವ್ರ ಪತ್ನಿಗೆ ತೋಷಖಾನಾ ಪ್ರಕರಣದಲ್ಲಿ ವಿಧಿಸಲಾಗಿದ್ದ 14 ವರ್ಷ ಜೈಲು ಶಿಕ್ಷೆಯನ್ನ ಇದೀಗ ಪಾಕ್‌ ಕೋರ್ಟ್‌ ಅಮಾನತು ಮಾಡಿ ಆದೇಶಿಸಿದೆ. ಇನ್ನು ಹತ್ತು ದಿನಗಳಲ್ಲಿ ಶುರುವಾಗೊ ಈದ್‌ ರಜಾ ದಿನಗಳ ನಂತ್ರ ಇಮ್ರಾನ್‌ರ ಮೇಲ್ಮನವಿ ಪ್ರಕರಣವನ್ನ ಕೋರ್ಟ್‌ ಡಿಸೈಡ್‌ ಮಾಡ್ಬಹುದು. ಹೀಗಾಗಿ ಅಲ್ಲಿವರೆಗೆ ಈ ಶಿಕ್ಷೆಯನ್ನ ಕೋರ್ಟ್‌ ಸಸ್ಪೆಂಡ್‌ ಮಾಡಿದೆ ಅಂತ ಇಮ್ರಾನ್‌ ಪರ ವಕೀಲರು ಮಾಹಿತಿ ನೀಡಿದ್ದಾರೆ. ಆದ್ರೆ ಈ ಒಂದು ಶಿಕ್ಷೆ ಖುಲಾಸೆ ಆದ್ರೆ ಏನ್‌ ಪ್ರಯೋಜನ, ಇಮ್ರಾನ್‌ ಮೇಲೆ ಇನ್ನು ಸಾಕಷ್ಟು ಕೇಸ್‌ಗಳಿವೆ. ಅದ್ರಲ್ಲೂ ಇನ್ನು ಎರಡು ಸ್ಟ್ರಾಂಗ್‌ ಕೇಸ್‌ಗಳಿವೆ. ಹೀಗಾಗಿ ಇಮ್ರಾನ್ ಜೈಲಿನಿಂದ ಹೊರ ಬರೋಕೆ ಆಗಲ್ಲ ಅನ್ನೊದು ಕನ್ಫರ್ಮ್‌ ಆಗಿದೆ. ಅಂದ್ಹಾಗೆ ಪಾಕ್‌ ಪ್ರಧಾನಿಯಾಗಿದ್ದ ವೇಳೆ ಐಷಾರಾಮಿ ಉಡುಗೊರೆಗಳನ್ನ ಸ್ವೀಕರಿಸಿ, ಮಾರಾಟ ಮಾಡಿದ ವಿಚಾರವಾಗಿ ಇಮ್ರಾನ್‌ ದಂಪತಿಗಳ ಮೇಲೆ ತೋಷಖಾನಾ ಕೇಸ್‌ ದಾಖಲಾಗಿತ್ತು. ಜೊತೆಗೆ ಇಮ್ರಾನ್‌ ದಂಪತಿಗಳಿಗೆ ಜನವರಿ 31ರಂದು 14 ವರ್ಷ ಜೈಲು ಶಿಕ್ಷೆ ಕೂಡ ಪಾಕ್ ಕೋರ್ಟ್‌ನೀಡಿತ್ತು.

-masthmagaa.com

Contact Us for Advertisement

Leave a Reply