24 ಗಂಟೆಯಲ್ಲಿ ದೇಶದಲ್ಲಿ 12,193 ಕೊರೊನಾ ಕೇಸ್‌ ದಾಖಲೆ, 42 ಸಾವು!

masthmagaa.com:

ದೇಶದಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ನಿಧಾನವಾಗಿ ಏರಿಕೆಯಾಗ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 12,193 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಆಕ್ಟೀವ್‌ ಕೇಸ್‌ಗಳ ಸಂಖ್ಯೆ 67,556ಕ್ಕೆ ಏರಿಕೆಯಾಗಿವೆ. ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ 42 ಸಾವುಗಳು ವರದಿಯಾಗಿವೆ. ಇದ್ರಲ್ಲಿ ಕೇರಳದಲ್ಲೇ 10 ಸಾವುಗಳು ದಾಖಲಾಗಿವೆ. ಇನ್ನು ಕೋವಿಡ್‌ ಪ್ರಕರಣಗಳು ಹೆಚ್ತಿರೊ ಹಿನ್ನೆಲೆ ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯವಿರೊ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಂದ್ಹಾಗೆ ರಾಜ್ಯದಲ್ಲಿ ಕೋವಿಡ್‌ ಹರಡುವಿಕೆ ಪ್ರಮಾಣ 2.83% ಇದೆ. ಆದ್ರ ಬೆಂಗಳೂರಿನಲ್ಲಿ 6.7% ಇದೆ. ಇನ್ನು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 29.65% ಕೋವಿಡ್‌ ಹರಡುವಿಕೆ ಪ್ರಮಾಣವಿದೆ. ಇನ್ನು ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗ್ತಿರೊ ಹಿನ್ನೆಲೆ ಕೋವಿಡ್‌ ಲಸಿಕೆ ತಯಾರಿಕಾ ಕಂಪನಿ, ಸೀರಮ್‌ ಇನ್‌ಸ್ಟಿಟ್ಯುಟ್‌ ಆಫ್ ಇಂಡಿಯಾ, 50‌ ರಿಂದ 60 ಲಕ್ಷ ಡೋಸ್ ಲಸಿಕೆಗಳು ರೆಡಿ ಇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply