ಕೋವಿಡ್‌ ಲಸಿಕೆಯಿಂದ ಹಠಾತ್‌ ಸಾವು! ICMR ಹೇಳಿದ್ದೇನು ಗೊತ್ತಾ?

masthmagaa.com:

ಕೋವಿಡ್‌ನಿಂದ ತಪ್ಪಿಸಿಕೊಳಲು ವ್ಯಾಕ್ಸಿನ್‌ ಹಾಕಿಕೊಂಡ ಯುವ ಜನತೆಗೆ ಹಠಾತ್ ಸಾವು ಸಂಭವಿಸಲ್ಲ ಅಂತ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ICMR) ತಿಳಿಸಿದೆ. ಅದರಲ್ಲೂ 18-45 ವಯಸ್ಸಿನವರೆಗೆ ಕೋವಿಡ್ ವ್ಯಾಕ್ಸಿನ್‌ ಸಹಕಾರಿಯಾಗಲಿದೆ ಅಂತ ICMRನ ಸಮಗ್ರ ತನಿಖೆಯಲ್ಲಿ ಸಾಬೀತಾಗಿದೆ. 2021 ಅಕ್ಟೋಬರ್‌ 1ರಿಂದ 2023ರ ಮಾರ್ಚ್ 31ವರೆಗಿನ ಅವಧಿಯ ಸಮೀಕ್ಷೆಯಲ್ಲಿ ವ್ಯಾಕ್ಸಿನ್‌ ಯುವ ಜನತೆಯಲ್ಲಿ ಹಠಾತ್‌ ಸಾವಿಗೆ ಕಾರಣವಲ್ಲ ಅನ್ನೋ ವಿಚಾರ ಗೊತ್ತಾಗಿದೆ. ಜೊತೆಗೆ ಎರಡು ಡೋಸ್‌ ವ್ಯಾಕ್ಸಿನ್‌ ಪಡೆದುಕೊಂಡವರಿಗೆ ತ್ವರಿತ ಸಾವಿನಿಂದಲೂ ಬಚಾವ ಆಗಬಹುದು ಆದರೆ ಒಂದೇ ಡೋಸ್‌ ಪಡೆದಿರೋರಿಗೆ ಈ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅಂದ್ಹಾಗೆ ನವರಾತ್ರಿ ವೇಳೆ ಗುಜರಾತಿನಲ್ಲಿ ಸಂಭವಿಸಿದ ಸರಣಿ ಸಾವಿನ ಬಗ್ಗೆ ರಿಯಾಕ್ಟ್‌ ಮಾಡೋ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಕ್‌ ಮಾಂಡವೀಯ ಕೂಡ ICMRನ ಈ ಹಿಂದಿನ ಅಧ್ಯಯನದ ಬಗ್ಗೆ ಹೇಳಿದ್ದರು. ಹಾಗೂ ಕೋವಿಡ್‌ನಿಂದ ಜಾಗೃತರಾಗಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.

-masthmagaa.com

Contact Us for Advertisement

Leave a Reply