ಚಂದ್ರನ ಮೇಲೆ ತಗ್ಗು ಮೂಡಿಸಿದ ರಷ್ಯಾದ ಲೂನಾ-25!

masthmagaa.com:

ಚಂದ್ರನ ದಕ್ಷಿಣ ಧ್ರುವದ ಅಧ್ಯಯನಕ್ಕಾಗಿ ರಷ್ಯಾ ಕಳಿಸಿದ್ದ ಲೂನಾ-25 ಮಿಷನ್‌ ವಿಫಲವಾಗಿತ್ತು. ಇದೀಗ ಲೂನಾ -25 ಪತನವಾದ ಸ್ಥಳವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿದೆ. ನಾಸಾದ Lunar Reconnaissance Orbiter (LRO) ಚಂದ್ರನ ಮೇಲಿನ ಕುಳಿಯ ಹೊಸ ಚಿತ್ರವನ್ನು ಸೆರೆಹಿಡಿದಿದೆ. ಈ ಕುಳಿಯನ್ನ ಲೂನಾ 25 ಮಿಷನ್​ ಪತನವಾದ ಸ್ಥಳ ಅಂತ ಹೇಳಲಾಗಿದೆ. 2022ರ ಜೂನ್​ ತಿಂಗಳಲ್ಲಿ ತೆಗೆದ ಚಿತ್ರ ಮತ್ತು ಇತ್ತೀಚೆಗೆ ಸೆರೆಹಿಡಿದ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದ್ದು, ಮೊದಲು ತೆಗೆದ ಚಿತ್ರದಲ್ಲಿ ಚಂದ್ರನ ಮೇಲಿನ ಕುಳಿಯ ಪಕ್ಕದಲ್ಲಿ ಯಾವುದೇ ಗುರುತು ಅಂದರೆ ಮತ್ತೊಂದು ಕುಳಿ ಪತ್ತೆಯಾಗಿರಲಿಲ್ಲ. ಆದರೆ, ಇತ್ತೀಚೆಗೆ ತೆಗೆದ ಚಿತ್ರದಲ್ಲಿ ಚಂದ್ರನ ಕುಳಿಯ ಪಕ್ಕದಲ್ಲಿ ಮತ್ತೊಂದು ಕುಳಿ ಕಾಣ್ತಿದೆ. ಹೀಗಾಗಿ ಇದೇ ಲೂನಾ 25 ಪತನಗೊಂಡ ಜಾಗ ಅಂತ ಭಾವಿಸಲಾಗಿದೆ. ಈ ಹೊಸ ಕುಳಿ ಸುಮಾರು 10 ಮೀಟರ್ ವ್ಯಾಸವನ್ನು ಹೊಂದಿದೆ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply