ಬಾಂಗ್ಲಾದೇಶ ಕ್ರಿಕೆಟ್‌ ಟೀಮ್‌ನ ನಾಯಕ ಶಕಿಬ್‌ ಅಲ್‌ ಹಸನ್‌ ರಾಜಕೀಯಕ್ಕೆ ಎಂಟ್ರಿ!

masthmagaa.com:

ಬಾಂಗ್ಲಾದೇಶ ಕ್ರಿಕೆಟ್‌ ತಂಡದ ನಾಯಕ ಹಾಗೂ ಬ್ಯಾಟರ್‌ ಶಕಿಬ್‌ ಅಲ್‌ ಹಸನ್‌ ರಾಜಕೀಯಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದಾರೆ. ಮುಂಬರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಅಂತ ತಿಳಿದು ಬಂದಿದೆ. ಬಾಂಗ್ಲಾದ ರೂಲಿಂಗ್‌ ಪಾರ್ಟಿ ಅವಾಮಿ ಲೀಗ್‌ನ ಅಭ್ಯರ್ಥಿಯಾಗಿ ಶಕಿಬ್‌ ತಮ್ಮ ತವರು ಜಿಲ್ಲೆ ಮಗುರಾ-1 ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅನ್ನೋದು ಕನ್ಫರ್ಮ್‌ ಆಗಿದೆ. ಜನವರಿ 7ರಂದು ಬಾಂಗ್ಲಾ ಜನರಲ್‌ ಎಲೆಕ್ಷನ್‌ ನಡೆಯಲಿದೆ. ಆದ್ರೆ ಬಾಂಗ್ಲಾ ವಿರೋಧ ಪಕ್ಷಗಳು ಪ್ರಸ್ತು ಪ್ರಧಾನಿ ಶೇಖ್‌ ಹಸೀನಾ ಹುದ್ದೆಯಿಂದ ಕೆಳಗಿಳಿದು ನ್ಯೂಟ್ರಲ್‌ ಕೇರ್‌ಟೇಕರ್‌ ಸರ್ಕಾರದಿಂದ ಚುನಾವಣೆ ನಡೆಸಬೇಕು ಅಂತ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಇನ್ನು ಕ್ರಿಕೆಟರ್‌ ಒಬ್ರು ಬಾಂಗ್ಲಾ ರಾಜಕಾರಣಕ್ಕೆ ಧುಮುಕುತ್ತಿರೋದು ಇದೇ ಮೊದಲಲ್ಲ. 2009ರಲ್ಲಿ ಮಾಜಿ ಸ್ಟಾರ್‌ ಕ್ರಿಕೆಟರ್‌ ಮಶ್ರಫೆ ಮೊರ್ತಾಜ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಪಿ ಆಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಮೊರ್ತಾಜ ಬಾಂಗ್ಲಾದೇಶ ಕ್ರಿಕೆಟ್‌ ಬೋರ್ಡ್‌ನ ಅಧ್ಯಕ್ಷರೂ ಹೌದು.

-masthmagaa.com

Contact Us for Advertisement

Leave a Reply