ಪಾಕಿಸ್ತಾನದಲ್ಲಿ ರೂಪಾಯಿ ಮೌಲ್ಯ ದಾಖಲೆ ಕುಸಿತ! 1 ಡಾಲರ್‌ಗೆ ಪಾಕಿಗಳು ಕೊಡಬೇಕು 270 ರೂ.!

masthmagaa.com:

ಪಾಕಿಸ್ತಾನದ ಪೇಷಾವರದ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದ ಆತ್ಮಾಹುತಿ ದಾಳಿಯಲ್ಲಿ ಸಾವೀಗೀಡಾದವರ ಸಂಖ್ಯೆ 83ನ್ನ ತಲುಪಿದೆ. ಘಟನೆಯಲ್ಲಿ ನೂರಾರು ಜನ ಗಾಯಗೊಂಡಿದ್ದು ನಿರಂತರವಾಗಿ ಸಾವಿನ ಸಂಖ್ಯೆ ಏರ್ತಾನೇ ಇದೆ. ಈ ದಾಳಿಯ ಹೊಣೆಯನ್ನ ಟಿಟಿಪಿ ಉಗ್ರರು ಹೊತ್ತುಕೊಂಡಿದ್ದು ಘಟನೆಗೆ ವಿಶ್ವಸಂಸ್ಥೆ ಕೂಡ ಖಂಡನೆ ವ್ಯಕ್ತಪಡಿಸಿದೆ. ಈ ಮಧ್ಯೆ ಪಾಕಿಸ್ತಾನದಲ್ಲಿ ಆರ್ಥಿಕತೆ ಹದಗೆಟ್ಟಿರೋದ್ರಿಂದ ರೂಪಾಯಿ ಮೌಲ್ಯ ಸಹ ದಿಡೀರ್‌ ಅಂತ ಕುಸಿತ ಕಾಣ್ತಿದೆ. ಮೂರು ದಿನಗಳ ಹಿಂದೆಯಷ್ಟೇ ಒಂದು ಡಾಲರ್‌ಗೆ 230 ಪಾಕ್‌ ರೂಪಾಯಿ ಇತ್ತು. ಇದು ಮೂರೇ ದಿನದಲ್ಲಿ 14.50%ರಷ್ಟು ಏರಿಕೆಯಾಗಿ ಈಗ ಪ್ರತಿ ಅಮೆರಿಕನ್‌ ಡಾಲರ್‌ಗೆ 270.10 ಪಾಕ್‌ ರೂಪಾಯಿ ಆಗಿದೆ.

-masthmagaa.com

Contact Us for Advertisement

Leave a Reply