ಕಾಮನ್‌ವೆಲ್ತ್‌ನಲ್ಲಿ ಗೆದ್ದ ಮಗನ ಚಿನ್ನದ ಪದಕವನ್ನ ಹರಿದ ಸೀರೆಯಲ್ಲಿ ಸುತ್ತಿಟ್ಟ ತಾಯಿ!

masthmagaa.com:

ಇತ್ತೀಚೆಗೆ ಅಂತ್ಯಗೊಂಡ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗದ್ದುಕೊಟ್ಟ ಅಚಿಂತ್‌ ಶೆಯುಲಿ ಅವ್ರ ಜೀವನದ ಕುರಿತು ಸುದ್ದಿಯಾಗ್ತಿದೆ. ಪುರುಷರ 73 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದು ಮನೆಗೆ ಆಗಮಿಸುತ್ತಿದ್ದಂತೆ ತಾಯಿ ಪೂರ್ಣಿಮಾ ಶೆಯುಲಿ ಚಿನ್ನದ ಪದಕವನ್ನ ನೋಡಿ ಕಣ್ಣೀರು ಹಾಕಿದ್ದಾರೆ. ಬಳಿಕ ಪದಕವನ್ನ ತಮ್ಮ ಹರಿದ ಸೀರೆಯಲ್ಲಿ ಸುತ್ತಿ ಬೆಡ್‍ನ ಒಂದರ ಕೆಳಗೆ ಇಟ್ಟಿದ್ದಾರೆ. ಈ ಕ್ಷಣ ಅಲ್ಲಿದ್ದ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ. ಕಷ್ಟದ ಪರಿಸ್ಥಿತಿಯಲ್ಲೇ ಅಚಿಂತ್ ಈ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡೋಕೆ ಸಹಾಯ ಮಾಡಿದ್ದ ಅಣ್ಣ ಅಲೋಕ್ ಹಾಗೂ ಕೋಚ್ ಆಸ್ತಮ್ ದಾಸ್‍ಗೆ ಪದಕವನ್ನ ಅರ್ಪಿಸಿದ್ದಾರೆ.

-masthmagaa.com

Contact Us for Advertisement

Leave a Reply