ಬಂಗಾಳಕೊಲ್ಲಿಯಲ್ಲಿ ʻಮಿಧಿಲಿʼ ಚಂಡಮಾರುತ! ಒಡಿಶಾದಲ್ಲಿ ಸುರಿಯಲಿದೆ ಭಾರೀ ಮಳೆ!

masthmagaa.com:

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರೋ ಚಂಡಮಾರುತ ತೀವ್ರಗೊಳ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಬಾಂಗ್ಲಾದೇಶದ ಕರಾವಳಿಯನ್ನ ಕ್ರಾಸ್ ಮಾಡಲಿದೆ ಅಂತ ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರೋ ಇಲಾಖೆ, ʻಈ ಚಂಡಮಾರುತ ಪ್ರತೀ ಗಂಟೆಗೆ 17 ಕಿಲೋಮೀಟರ್‌ ವೇಗದಲ್ಲಿ ಉತ್ತರ-ಈಶಾನ್ಯ ದಿಕ್ಕಿನ ಕಡೆಗೆ ಸಾಗೋದನ್ನ ಕಂಟಿನ್ಯೂ ಮಾಡಲಿದೆ. ಒಮ್ಮೆ ಇದು ಸಂಪೂರ್ಣ ಚಂಡಮಾರುತವಾಗಿ ತೀವ್ರ ಸ್ವರೂಪ ಪಡೆದ ನಂತರ ಇದಕ್ಕೆ ʻಮಿಧಿಲಿʼ ಅಂತ ಹೆಸರಿಡಲಾಗುತ್ತೆʼ ಅಂತ ಹೇಳಿದೆ. ಅಂದ್ಹಾಗೆ ಚಂಡಮಾರುತಕ್ಕೆ ಈ ಹೆಸರನ್ನ ಮಾಲ್ಡಿವ್ಸ್‌ ನೀಡಿದೆ. ಇನ್ನು ಈ ಚಂಡಮಾರುತ ಪರಿಣಾಮದಿಂದ ಬಾಂಗ್ಲಾದೇಶದ ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾಗೋ ಸಾಧ್ಯತೆಯಿದೆ. ಜೊತೆಗೆ ಒಡಿಶಾದ ಹಲವು ಭಾಗಗಳಲ್ಲಿ, ಪ್ರಮುಖವಾಗಿ ಅಲ್ಲಿನ ಕರಾವಳಿ ಪ್ರದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗೋ ಸಾಧ್ಯತೆಯಿದೆ ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply