ಬಂಗಾಳ ಕೊಲ್ಲಿಯಲ್ಲಿ ʻಮೋಚಾʼ ಚಂಡಮಾರುತ ಉದ್ಭವ: ದೇಶಾದ್ಯಂತ ಗುಡುಗು ಸಹಿತ ಭಾರಿ ಮಳೆ

masthmagaa.com:

ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ʻಮೋಚಾʼ ಚಂಡಮಾರುತ ಎದ್ದಿದ್ದು, ದೇಶದ ವಿವಧ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಅದ್ರಲ್ಲೂ ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಮೇ 8 ರಿಂದ 12ರವರೆಗೆ ಚಂಡಮಾರುತದ ಪ್ರಭಾವದಿಂದ ಅತಿಹೆಚ್ಚು ಮಳೆಯಾಗಲಿದೆ. ಮುಂದಿನ ದಿನಗಳಲ್ಲಿ ಚಂಡಮಾರುತ ತೀವ್ರಗೊ‍‍ಳ್ಳುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದೇ ವೇಳೆ ಮುಂದಿನ 5 ದಿನಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಹೀಟ್‌ವೇವ್‌ ಪರಿಸ್ಥಿತಿ ಇರೋದಿಲ್ಲ ಅಂತ ಕೂಡ ಹೇಳಿದೆ. ಇತ್ತ ಬಂಗಾಳಕೊಲ್ಲಿಯಲ್ಲಿ ಹೆಚ್ಚಾಗಿರುವ ಸೈಕ್ಲೋನ್‌ ಪ್ರಭಾವ ರಾಜ್ಯದಲ್ಲೂ ಕಂಡುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು,ಇನ್ನು ಮೇ 10ರವರೆಗೆ ಇದೇ ರೀತಿ ಮಳೆ ಮುಂದುವರೆಯಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply