ಸಾಮಾನ್ಯ ಜನ ಕೂಡ ಬೀದಿಯಲ್ಲಿ ಈ ರೀತಿ ಆಡೋದಿಲ್ಲ: ರೂಪ-ರೋಹಿಣಿ ಜಗಳಕ್ಕೆ ಗೃಹ ಸಚಿವ ಕಿಡಿ!

masthmagaa.com:

ರಾಜ್ಯದಲ್ಲಿ ಇಬ್ರು IAS, IPS ಅಧಿಕಾರಿಗಳ ಜಂಗೀಕುಸ್ತಿ ಮುಂದುವರೆದಿದೆ. IAS ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್‌ ಅಧಿಕಾರಿ ಡಿ ರೂಪ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಅಕ್ರಮ ಅಸ್ತಿಗಳಿಕೆಯ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಈ ಆರೋಪವನ್ನ ಪ್ರಶ್ನಿಸಿ ಇವತ್ತು ರೋಹಿಣಿ ಸಿಂಧೂರಿ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ರೂಪ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಂಧೂರಿ, ಗೆಟ್ ವೆಲ್‌ ಸೂನ್‌ ಅಂತ ಹೇಳಿದ್ದಾರೆ. ಅಂದ್ರೆ ರೂಪ ಅವರು ಬೇಗ ಹುಷಾರಾಗಲಿ ಅಂತ. ಇತ್ತ ರೋಹಿಣಿ ಸಿಂಧೂರಿ ತರುವಾಯ ರೂಪ ಕೂಡ ವಂದಿತಾ ಶರ್ಮಾರನ್ನ ಭೇಟಿಯಾಗಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ದ ಮಾಡಿರೋ ಆರೋಪಗಳು ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಈ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಪಟ್ಟಂತೆ ಸಿಂಧೂರಿ ವಿರುದ್ದ ಕೆಲವು ಚಾಟ್‌ಗಳನ್ನ ಕೊಟ್ಟಿದ್ದಾರೆ ಅಂತ ಹೇಳಲಾಗಿದೆ. ಈ ಕಡೆ ಈ ಇಬ್ರೂ ಉನ್ನತ ಅಧಿಕಾರಿಗಳ ಬೀದಿ ಜಗಳಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯ ಜನರು ಕೂಡ ಬೀದಿಯಲ್ಲಿ ಈ ರೀತಿ ಕೆಟ್ಟ ವರ್ತನೆ ಮಾಡೋದಿಲ್ಲ. ಅವರ ನಡವಳಿಕೆ ಐಎಎಸ್‌ ಐಪಿಎಸ್‌ ಅಧಿಕಾರಿಗಳ ವರ್ಗಕ್ಕೆ ಅವಮಾನ. ಅವರ ಮೇಲೆ ಕ್ರಮ ತಗೊಳ್ಳುತ್ತೇವೆ, CM ಅವರು ಕಾನೂನು ಚೌಕಟ್ಟಿನಲ್ಲಿ ಏನ್‌ ಮಾಡಬೇಕೋ ಅದನ್ನ ಮಾಡ್ತಾರೆ ಅಂತ ಹೇಳಿದ್ದಾರೆ. ಅಧಿಕಾರಿಗಳ ಕಿತ್ತಾಟ ಹೀಗೆ ಮುಂದುವರಿದ್ರೆ ಕ್ರಮ ಜರುಗಿಸುತ್ತೇವೆ ಅಂತಾ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ​ ವಾರ್ನಿಂಗ್​ ಕೊಟ್ಟಿದ್ದಾರೆ. ಇನ್ನು ಈ ಇಬ್ರು ಅಧಿಕಾರಿಗಳ ಜಗಳ ಸದನದಲ್ಲೂ ಪ್ರತಿಧ್ವನಿಸಿದೆ. ಮಳವಳ್ಳಿ ಶಾಸಕ ಅನ್ನದಾನಿ ಅವರು ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಇತ್ತ ಡಿ ರೂಪಾ ಹಾಗೂ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಅಥವಾ ಕಡ್ಡಾಯ ರಜೆ ಮೇಲೆ ಕಳುಹಿಸಿಕೊಡುವ ಸಾಧ್ಯತೆ ಇದೆ. ಸಿಎಂ ಬೊಮ್ಮಾಯಿ ಈ ಕುರಿತು ಚರ್ಚೆ ನಡೆಸಿದ್ದಾರೆ ಅಂತ ಸುದ್ದಿಯಾಗಿದೆ. ಇನ್ನು ಈ ಆರೋಪದ ಬಗ್ಗೆ ಡಿಕೆ ರವಿ ತಾಯಿ ಗೌರಮ್ಮ ಮಾತನಾಡಿ, ನಿನ್ನೆಯಿಂದ ಟಿವಿಯಲ್ಲಿ ನನ್ನ ಮಗನ ಹೆಸರು ನೋಡಿ ತುಂಬಾ ಬೇಸರ ಆಗಿದೆ. ನೀವಿಬ್ರೂ ಏನಾದ್ರೂ ಮಾಡ್ಕೊಳ್ಳಿ. ನನ್ನ ಮಗನ ಹೆಸರು ತರಬೇಡಿ. ಸಿಂಧೂರಿ ವಿರುದ್ದ ಅಪರಾಧ ಹೊರಿಸೋಕೆ ರೂಪ ಈ ರೀತಿ ಮಾಡ್ತಿದ್ದಾರೆ. ಸಿಂಧೂರಿ ನನ್ನ ಮಗನ ಜೊತೆಗೆ ಇದ್ದಿದ್ದು ನಿಜ. ಒಂದೆರಡು ಬಾರಿ ನಮ್ಮ ಮನೆಗೆ ಬಂದಿದ್ರು. ಆದ್ರೆ ರವಿ ಸತ್ತೋದ್ಮೇಲೆ ನನ್ನಹತ್ರಕ್ಕೆ ಬಂದಿಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply