ಹುಡುಗನನ್ನ ನಾಲಿಗೆ ನೆಕ್ಕು ಎಂದು ಕೇಳಿದ 88 ವರ್ಷದ ಬೌದ್ದ ಗುರು ದಲೈಲಾಮ! ಈಗ ಕ್ಷಮೆ!

masthmagaa.com:

ಬಾಲಕನನ್ನ ತನ್ನ ನಾಲಿಗೆ ನೆಕ್ಕು ಅಂತ ಕೇಳಿ ತೀವ್ರ ಟೀಕೆಗೆ ಗುರಿಯಾಗಿದ್ದ ಬೌದ್ಧ ಧರ್ಮ ಗುರು ದಲೈಲಾಮ ಕೊನೆಗೂ ಕ್ಷಮೆ ಕೇಳಿದ್ದಾರೆ. ಸಮಾರಂಭವೊಂದರಲ್ಲಿ ಆಶೀರ್ವಾದ ಪಡೆಯೋಕೆ ಅಂತ ಬಾಲಕನೊಬ್ಬ ದಲೈ ಲಾಮಾ ಹತ್ರ ಬಂದಿದ್ದ. ಆಗ ಆ ಹುಡುಗನ ತುಟಿಗಳಿಗೆ ದಲೈಲಾಮ ಮುತ್ತು ಕೊಟ್ಟಿದ್ರು. ಬಳಿಕ ಮಗುವಿಗೆ ತನ್ನ ನಾಲಿಗೆ ನೆಕ್ಕು ಎಂದು ಹೇಳಿದ್ರು, ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ಕೇಳಿ ಬಂದಿತ್ತು. ದಲೈಲಾಮಾರನ್ನ ಶಿಶುಕಾಮದ ಪ್ರಕರಣದಲ್ಲಿ ಬಂಧಿಸಬೇಕು ಅಂತ ಒತ್ತಾಯ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ 88 ವರ್ಷದ ದಲೈಲಾಮ ಪ್ರತಿಕ್ರಿಯಿಸಿದ್ದಾರೆ. ತಮ್ಮ ವರ್ತನೆಯಿಂದ ಯಾರಿಗಾದರು ನೋವಾಗಿದ್ದಲ್ಲಿ ಬಾಲಕನ ಕುಟುಂಬದ ಹತ್ರ ಹಾಗೂ ಜಗತ್ತಿನ ಹತ್ರ ಕ್ಷಮೆ ಕೇಳ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply