68ನೇ ಮಹಡಿಯಿಂದ ಬಿದ್ದು ಸೋಷಿಯಲ್‌ ಮೀಡಿಯಾ ಇನ್‌ಪ್ಲುಯನ್ಸರ್‌ ಸಾವು!

masthmagaa.com:

ಗಗನಚುಂಬಿ ಕಟ್ಟಡಗಳನ್ನ ಏರಿ ರೀಲ್ಸ್‌ ಮಾಡಿ ಹೆಸರು ಮಾಡಿದ್ದ ಫ್ರಾನ್ಸ್‌ನ ಡೇರ್‌ಡೆವಿಲ್‌ ರೆಮಿ ಲುಸಿಡಿ ಅನ್ನೋರು 68ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. 30 ವರ್ಷದ ಈ ಸೋಷಿಯಲ್‌ ಮೀಡಿಯಾ ಇನ್‌ಪ್ಲುಯೆನ್ಸರ್‌ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನ ಸರಸರ ಅಂತ ಏರ್ತಾ ಇದ್ರು. ಅದರ ವಿಡಿಯೋಗಳು ಹಾಗೂ ಫೋಟೊಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡ್ತಿದ್ರು. ಈ ರೀತಿ ಹೈ ರೈಸ್‌ ಕಟ್ಟಡಗಳ ಸ್ಟಂಟ್‌ಗಳ ಮೂಲಕವೇ ಹೆಸರುವಾಸಿಯಾಗಿದ್ದ ರೆಮಿ, ಹಾಂಕಾಂಗ್‌ನಲ್ಲಿ ಅಂಥದ್ದೇ ಪ್ರಯತ್ನ ಮಾಡುವ ವೇಳೆ 68ನೇ ಮಹಡಿಯಿಂದ ಅಂದರೆ ಅಂದಾಜು 721 ಫೀಟ್‌ ಎತ್ತರಿಂದ ಬಿದ್ದು ಅಂತ್ಯ ಕಂಡಿದಾರೆ.

-masthmagaa.com

Contact Us for Advertisement

Leave a Reply