ಮಿಷನ್ ಲೈಫ್‌ಗೆ ಮೋದಿ ಚಾಲನೆ: ವಿವಿಧ ದೇಶಗಳಿಂದ ಅಭಿನಂದನೆ

masthmagaa.com:

ಗುಜರಾತ್‌ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ, ಪ್ರಧಾನಿ ಮೋದಿ ಆಗಾಗ್ಗೆ ಗುಜರಾತ್‌ಗೆ ಭೇಟಿ ನೀಡಿ ಒಂದಲ್ಲಾ ಒಂದು ಯೋಜನೆಗಳನ್ನ ಪ್ರಾರಂಭಿಸುತ್ತಿದ್ದಾರೆ. ಇದೀಗ ಕೆವಾಡಿಯಾದ ಏಕತಾ ನಗರದ ಏಕತಾ ಪ್ರತಿಮೆಯಲ್ಲಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಉಪಸ್ಥಿತಿಯಲ್ಲಿ, ಮೋದಿ ʻಮಿಷನ್ ಲೈಫ್‌ʼಗೆ ಚಾಲನೆ ಕೊಟ್ಟಿದ್ದಾರೆ. ಈ Mission LiFE- Lifestyle for Environment ಅಂದ್ರೆ ಪರಿಸರಕ್ಕಾಗಿ ಜೀವನಶೈಲಿ. ಪರಿಸರದ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ನಮ್ಮ ಲೈಫ್‌ ಸ್ಟೈಲ್‌ ಸೆಟ್‌ ಮಾಡೋದು. ನಮ್ಮ ಕೈಲಾದಷ್ಟು ನಮ್ಮ ಜೀವನಶೈಲಿಯನ್ನ ಬದಲಿಸಿಕೊಂಡ್ರೆ ಪರಿಸರಕ್ಕೆ ಸಹಾಯವಾಗುತ್ತೆ ಅಂತ ಮೋದಿ ಹೇಳಿದ್ದಾರೆ. ಈ ವಿಶಿಷ್ಟ ಮಿಷನ್‌ಗೆ ಚಾಲನೆ ನೀಡಿದ ಮೋದಿಗೆ ಫ್ರಾನ್ಸ್, ಯುಕೆ, ಅರ್ಜೆಂಟೀನಾ, ಜಾರ್ಜಿಯಾ, ನೇಪಾಳ, ಮಾಲ್ಡೀವ್ಸ್ ಸೇರಿ ಮುಂತಾದ ದೇಶಗಳು ಅಭಿನಂದನೆ ತಿಳಿಸಿವೆ.

-masthmagaa.com

Contact Us for Advertisement

Leave a Reply