84,560 ಕೋಟಿ ಮೌಲ್ಯದ ರಕ್ಷಣಾ ಸಾಮಾಗ್ರಿ ಖರೀದಿಗೆ ಅನುಮೋದನೆ!

masthmagaa.com:

ಭಾರತದ ರಕ್ಷಣಾ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬೋ ಕೆಲಸ ಮುಂದುವರೆದಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಡಿಫೆನ್ಸ್‌ ಅಕ್ವಿಸಿಷನ್‌ ಕೌನ್ಸಿಲ್‌ DAC ಬರೋಬ್ಬರಿ 84,560 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಹಣದಲ್ಲಿ ಟ್ಯಾಕ್ಟಿಕಲ್‌, ಕಂಟ್ರೋಲ್‌, ರೇಡಾರ್‌, ಹೆವಿವೇಟ್‌ ಟಾರ್ಪಿಡೋಸ್‌, ನೌಕಾವಿಮಾನಗಳು, ವಿಮಾನಗಳಿಗೆ ಇಂಧನ ತುಂಬೋ ಏರ್‌ಕ್ರಾಫ್ಟ್‌ಗಳು, ಸಾಫ್ಟ್‌ವೇರ್‌ ಡಿಫೈನ್ಡ್‌ ರೇಡಿಯೋಸ್‌ ಖರೀದಿ ಮಾಡಲಾಗುತ್ತೆ ಅಂತ ರಕ್ಷಣಾ ಇಲಾಖೆ ಹೇಳಿದೆ. ಅಲ್ಲದೇ ಮುಖ್ಯವಾಗಿ ಸೆಸ್ಮಿಕ್‌ ಸೆನ್ಸಾರ್‌ ಹೊಂದಿರೋ ಆಂಟಿ-ಟ್ಯಾಂಕ್‌ ಮೈನ್‌ಗಳನ್ನ ಕೂಡ ಖರೀದಿಸಲಾಗುತ್ತೆ ಅಂದಿದೆ. ಈ ಸುದ್ದಿ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ HAL ಶೇರುಗಳು 1.75% ಏರಿಕೆ ಕಂಡು ಪ್ರತಿ ಶೇರಿಗೆ ₹3,076ಆಗಿವೆ.

-masthmagaa.com

Contact Us for Advertisement

Leave a Reply