ಮಹಿಳಾ ವೈದ್ಯಕೀಯ ಶಿಕ್ಷಣ ಬ್ಯಾನ್‌ ಆದ್ರೂ ಸ್ಟಡಿ ಕಂಟಿನ್ಯೂ!

masthmagaa.com:

ಅಫ್ಘಾನ್‌ನ ಆಡಳಿತವಹಿಸಿಕೊಂಡು ಮಧ್ಯ ಯುಗೀನ ಕಾಲದ ರೋಗಗ್ರಸ್ತ ನಿಯಮಗಳನ್ನ ಹೇರ್ತಾ ಇರೋ ತಾಲಿಬಾನ್‌ ಅಫ್ಘಾನ್‌ನಲ್ಲಿ ಹೆಣ್ಣುಮಕ್ಕಳು ಮೆಡಿಕಲ್‌ ಓದೋದನ್ನ ಬ್ಯಾನ್‌ ಮಾಡಿದೆ. ಆದ್ರೆ ಈಗ ಅಲ್ಲಿನ ಕೆಲ ದಿಟ್ಟ ಯುವತಿಯರು ರಹಸ್ಯವಾಗಿ ಟೆಂಟ್‌ಗಳಲ್ಲಿ ಓದ್ತಾ ಇದಾರೆ ಅಂತ ವರದಿಯಾಗಿದೆ. ತಾಲಿಬಾನಿಗಳ ಕಣ್ತಪ್ಪಿಸಿ ಆನ್‌ಲೈನ್‌ ವಿಡಿಯೋಗಳನ್ನ ನೋಡ್ಕೊಂಡು ಚಿಕ್ಕ ಎಮರ್ಜೆನ್ಸಿ ಟೆಂಟ್‌ಗಳನ್ನ ಮಾಡ್ಕೊಂಡು ಮೆಡಿಸಿನ್‌ ಪ್ರಾಕ್ಟೀಸ್‌ ಮಾಡ್ತಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ತಾಲಿಬಾನಿಗಳು ನಿಷೇಧ ಹೇರಿದಾಗ ಸುಮಾರು 3 ಸಾವಿರ ಅಫ್ಘಾನ್‌ ಮಹಿಳೆಯರು ಮೆಡಿಕಲ್‌ ಕಾಲೇಜ್‌ನಿಂದ ಗ್ರ್ಯಾಜುವೇಟ್‌ ಆಗಿದ್ರು. ಆದ್ರೆ ದುಷ್ಟ ಸರ್ಕಾರ ಮೆಡಿಸಿನ್‌ ಪ್ರಾಕ್ಟೀಸ್‌ ಮಾಡೋಕೆ ಅಗತ್ಯವಾದ ಬೋರ್ಡ್‌ ಎಕ್ಸಾಮ್‌ ತಗೋಳೋಕೆ ಬಿಟ್ಟಿರ್ಲಿಲ್ಲ. ಈಗ ಇವ್ರೆಲ್ಲ ತಮಗೆ ತೋಚಿದ ಹಾಗೆ ತಮ್ಮ passionನ ಕಂಟಿನ್ಯೂ ಮಾಡ್ತಿದ್ದಾರೆ. ಇನ್ನು ಈಗಾಗಲೇ ಅಫ್ಘಾನ್‌ ಮಹಿಳಾ ವೈದ್ಯರು ಇಲ್ಲದೇ ತೀವ್ರ ಸಂಕಷ್ಟ ಎದುರಿಸ್ತಿದೆ. ಮಹಿಳೆಯರು ಮತ್ತು ಮಕ್ಕಳನ್ನ ಟ್ರೀಟ್‌ ಮಾಡೋಕೆ ಡಾಕ್ಟರ್‌ಗಳಿಲ್ಲ. WHO ವರದಿ ಪ್ರಕಾರ ಪ್ರೆಗ್ನನ್ಸಿ ಮತ್ತು ಡೆಲಿವರಿ ಟೈಂನಲ್ಲಿ ಪ್ರತಿದಿನ 24 ಮಹಿಳೆಯರು ಸಾವನ್ನಪ್ತಿದ್ದಾರೆ. ಅಂತದ್ರಲ್ಲಿ ತಾಲಿಬಾನ್‌ ತನ್ನ ಒಡಲಿಗೆ ತಾನೇ ಬೆಂಕಿ ಹಾಕಿಕೊಳ್ತಾ ಇದೆ.

-masthmagaa.com

Contact Us for Advertisement

Leave a Reply