ರೈತರ ʻದೆಹಲಿ ಚಲೋʼ ಪ್ರತಿಭಟನೆಗೆ ದೆಹಲಿ, ಹರಿಯಾಣ ಹೈ ಅಲರ್ಟ್‌!

masthmagaa.com:

ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಇದೀಗ ಹರ್ಯಾಣದ ರೈತರು ಫೆಬ್ರುವರಿ 13 ರಂದು ʻದೆಹಲಿ ಚಲೋʼ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಈ ಹಿನ್ನಲೆ ಇದೀಗ ದೆಹಲಿ, ಹರಿಯಾಣದಲ್ಲಿ ಹೈ ಅಲರ್ಟ್‌ ನೀಡಲಾಗಿದೆ. ಹರ್ಯಾಣ ಪೊಲೀಸ್‌ ಜನರಿಗೆ ಟ್ರಾಫಿಕ್‌ ಅಡ್ವೈಸರಿ ಬಿಡುಗಡೆ ಮಾಡಿದ್ದಾರೆ. ಅಗತ್ಯಯಿಲ್ದೇ ಸ್ಟೇಟ್‌ ಹೈವೇಗಳಿಗೆ ಬರಬೇಡಿ ಅಂತ ಸೂಚನೆ ನೀಡಿದ್ದಾರೆ. ಪ್ರತಿಭಟನೆಗೂ ಮುನ್ನ ಕಾನೂನು ಸುವ್ಯವಸ್ಥೆ ಕಾಪಾಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಿಕೆಯನ್ನ ದೆಹಲಿಯ ಸೀಲಂಪುರ್‌ ಜಿಲ್ಲೆ ಮತ್ತು ಹರಿಯಾಣದ ಪಂಚಕುಲದಲ್ಲಿ ಬ್ಯಾನ್‌ ಮಾಡಲಾಗಿದೆ. ದೆಹಲಿಯ ಗಡಿಯುದ್ದಕ್ಕೂ ಬಿಗಿ ಭದ್ರತೆ ಒದಗಿಸಲಾಗಿದೆ. ಪಂಜಾಬ್‌ ಮತ್ತು ಹರಿಯಾಣದಿಂದ ದೆಹಲಿಗೆ ಎಂಟ್ರಿ ಕೊಡಲಿರೋ ರೈತರನ್ನ ತಡೆಯೋಕೆ ಸಾಕಷ್ಟು ತಯಾರಿಗಳನ್ನ ಮಾಡಲಾಗ್ತಿದೆ. ದೊಡ್ಡ ದೊಡ್ಡ ಕ್ರೇನ್‌ಗಳು ಮತ್ತು ಕಂಟೈನರ್‌ಗಳನ್ನ ತಂದಿಟ್ಟು, ದೆಹಲಿ ಬಾರ್ಡರ್‌ ಸೀಲ್‌ ಮಾಡೋಕೆ ಪ್ಲಾನ್‌ ಮಾಡಲಾಗಿದೆ. ಅಷ್ಟೇ ಅಲ್ದೇ ಈ ಟೈಮ್‌ಲ್ಲಿ ಪಂಜಾಬ್‌ಗೆ ಹೋಗೋದನ್ನ ನಿಲ್ಲಿಸಿದ್ರೆ ಒಳ್ಳೇದು ಅಂತ ಜನರಿಗೆ ಅಡ್ವೈಸ್‌ ಮಾಡಿದ್ದಾರೆ. ಇನ್ನು ಹರಿಯಾಣದಿಂದ ಪಂಜಾಬ್‌ವರೆಗಿನ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗ್ಬೋದು ಅಂತ ಪೊಲೀಸ್‌ ಎಚ್ಚರಿಕೆ ಕೂಡ ನೀಡಿದ್ದಾರೆ. ಹರಿಯಾಣದ ಪಂಚಕುಲ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಹರಿಯಾಣ ಸರ್ಕಾರ ಕೆಲ ನಗರಗಳಲ್ಲಿ ಇಂಟರ್‌ನೆಟ್‌ ಸೇವೆಗಳು ಮತ್ತು ಬಲ್ಕ್‌ ಮೆಸೇಜ್‌ ಸೇವೆಗಳನ್ನ ಬಂದ್‌ ಮಾಡೋಕೆ ಆದೇಶ ನೀಡಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಫೆಬ್ರುವರಿ 13ರ ರಾತ್ರಿ 12 ಗಂಟೆವರೆಗೆ ಸೇವೆಗಳನ್ನ ಬಂದ್‌ ಮಾಡಲಾಗತ್ತೆ. ಜೊತೆಗೆ 50 ಕೇಂದ್ರ ಅರೆಸೇನಾ ಪಡೆಗಳ ತುಕಡಿಗಳನ್ನ ಹರಿಯಾಣ ಪೊಲೀಸ್‌ ನಿಯೋಜಿಸಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೆ ರೈತರು ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ರು. ಅಲ್ಲದೆ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸ್ವಾದೀನಗೊಂಡ ಅವರ ಜಮೀನುಗಳಿಗೆ ಪರ್ಯಾಯ ಪ್ಲಾಟ್‌ಗಳನ್ನ ಕೊಡಿ ಅಂತ ಪ್ರೊಟೆಸ್ಟ್‌ ಮಾಡಿದ್ರು. ಇನ್ನು ಇದೇ ಟೈಮಲ್ಲಿ ದೆಹಲಿ ಪೊಲೀಸ್‌ ಒಂದು ಅಚಾತುರ್ಯ ಮಾಡಿದ್ದಾರೆ. ರೈತರನ್ನ ತಡೆಯೋಕೆ ತಯಾರಿ ಡ್ರಿಲ್‌ ಮಾಡೋ ವೇಳೆ ಟಿಯರ್‌ಗ್ಯಾಸ್‌ ಅಥ್ವಾ ಅಶ್ರುವಾಯು ಶೆಲ್‌ ಬಳಕೆ ಅಭ್ಯಾಸ ನಡೆಸಿ, ಹತ್ತಿರದ ನಿವಾಸಿಗಳಿಗೆ ತೊಂದರೆ ಮಾಡಿದ್ದಾರೆ. ಟಿಯರ್‌ಗ್ಯಾಸ್‌ನಿಂದ ನಮ್ಮ ಕಣ್ಣು-ಮೂಗುಗಳು ಒಂದ್‌ ರೀತಿ ಉರಿಯೋಕೆ ಸ್ಟಾರ್ಟ್‌ ಆಯ್ತು. ಬ್ಲಾಕ್‌ ಆದ ಹಾಗೇ ಫೀಲ್‌ ಆಯ್ತು ಅಂತ ಲೋಕಲ್ಸ್‌ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply