ಯಾರಾಗ್ತಾರೆ ಕಾಂಗ್ರೆಸ್‌ ಪಕ್ಷದ ಮುಂದಿನ ಅಧ್ಯಕ್ಷ?

masthmagaa.com:

ಅಧ್ಯಕ್ಷ ಸ್ಥಾನದ ಚುನಾವಣೆ ಹತ್ತಿರವಾದ್ರು ಕೂಡ ಯಾರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿತಾರೆ ಎಂಬ ಗೊಂದಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಮತ್ತೆ ರಾಹುಲ್‌ ಗಾಂಧಿ ಅವ್ರಿಗೆ ಪಟ್ಟ ಕಟ್ಟಬೇಕೆಂಬ ಕಾಂಗ್ರೆಸ್ಸಿಗರ ಒತ್ತಾಸೆಗೆ ರಾಹುಲ್‌ ಮಣಿದಿಲ್ಲ ಅಂತ ಹೇಳಲಾಗ್ತಿದೆ. ಇನ್ನು ಸೋನಿಯಾ ಗಾಂಧಿಯವ್ರನ್ನೇ ಮುಂದುವರೆಸಬೇಕೆಂದ್ರೆ ಅವ್ರ ಆರೋಗ್ಯ ಸಾಥ್‌ ಕೊಡ್ತಿಲ್ಲ, ಹೀಗಾಗಿ ಕೊನೆಗೆ ಪ್ರಿಯಾಂಕ ಗಾಂಧಿಯವ್ರನ್ನೇ ಒತ್ತಾಯಿಸಬಹುದು. ಆದ್ರೆ ಉತ್ತರಪ್ರದೇಶದಲ್ಲಿ ಅವ್ರ ನೇತೃತ್ವದಲ್ಲೇ ಹೀನಾಯ ಸೋಲು ಅನುಭವಿಸಿರೋದು ಪ್ರಿಯಾಂಕ ಅವ್ರಿಗೆ ಹಿನ್ನಡೆಯಾಗಿದೆ. 2019ರಲ್ಲಿ ಚುನಾವಣೆ ಸೋಲಿನ ಬಳಿಕ ರಾಹುಲ್‌ ಮತ್ತೆ ಅಧ್ಯಕ್ಷರಾಗೋ ಒತ್ತಾಯವನ್ನ ಪದೇ ಪದೇ ನಿರಾಕರಿಸುತ್ತಾ ಬಂದಿದ್ದಾರೆ. ಜೊತೆಗೆ ಗಾಂಧಿಯೇತರ ಅಂದ್ರೆ ಗಾಂಧಿ ಕುಟುಂಬಕ್ಕೆ ಸೇರದವ್ರು ಅಧ್ಯಕ್ಷರಾಗಬೇಕು ಅಂತ ಹೇಳಿದ್ದಾರೆ ಎನ್ನಲಾಗಿದೆ. ಸೋ ʻಪ್ಲಾನ್‌-ಬಿʼಯಾಗಿ ಮಲ್ಲಿಕಾರ್ಜುನ್‌ ಖರ್ಗೆ ಅಥವಾ ಸುಶೀಲ್‌ ಕುಮಾರ್‌ ಶಿಂಧೆಯವ್ರನ್ನ ಕಣಕ್ಕಿಳಿಸಬಹುದು ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಸ್ಪಷ್ಟತೆಗಳು ಇಲ್ಲ. ಅಂದ್ಹಾಗೆ ಈ ಹಿಂದೆ ಕಾಂಗ್ರೆಸ್‌ ಪ್ರಕಟಣೆ ಪ್ರಕಾರ ನಾಳೆಯಿಂದ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಬೇಕಿತ್ತು.

-masthmagaa.com

Contact Us for Advertisement

Leave a Reply