ಗರ್ಭದಲ್ಲಿದ್ದ ಭ್ರೂಣಕ್ಕೆ ಹಾರ್ಟ್‌ ಆಪರೇಶನ್‌! ಮೆಡಿಕಲ್‌ ಮಿರಾಕಲ್‌!

masthmagaa.com:

ದಿಲ್ಲಿಯಲ್ಲಿ ಅಪರೂಪದ ವೈದ್ಯಕೀಯ ಚಿಕಿತ್ಸೆ ಮಾಡಲಾಗಿದೆ. ಇನ್ನೂ ಹುಟ್ಟದ ತಾಯಿಯ ಗರ್ಭದಲ್ಲಿರುವ ಶಿಶುವಿನ ದ್ರಾಕ್ಷಿ ಹಣ್ಣಿನ ಗಾತ್ರದ ಹೃದಯಕ್ಕೆ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ. ದಿಲ್ಲಿಯ ಏಮ್ಸ್‌ ಆಸ್ಪತ್ರೆ ವೈದ್ಯರು ಕೇವಲ 90 ಸೆಕೆಂಡುಗಳಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಬಲೂನ್ ಹಿಗ್ಗಿಸುವ (balloon dilation) ಪ್ರಕ್ರಿಯೆಯಿಂದ ಮಗುವಿನ ಜೀವ ಉಳಿಸಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಮಾಡಲಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.) ಅಂದ್ಹಾಗೆ 28 ವರ್ಷದ ಗರ್ಭಿಣಿ ಮಹಿಳೆಯೊಬ್ರು ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ರು. ಆಗ ಭ್ರೂಣದ ಹೃದಯದ ಕವಾಟದಲ್ಲಿ ತೊಂದರೆ ಇರೊ ವಿಷಯ ತಿಳಿಸಲಾಗಿದೆ. ಆದ್ರೆ ಈಗಾಗಲೇ 3 ಗರ್ಭಪಾತ ಅನುಭವಿಸಿದ್ದ ಪೋಷಕರು ಈ ಮಗುವನ್ನ ಉಳಿಸುವಂತೆ ಕೇಳಿಕೊಂಡಿದ್ದಾರೆ. ಆಗ ವೈದ್ಯರು ಈ ಅಪರೂಪದ ಆಪರೇಶನ್‌ ಮಾಡೋಕೆ ಮುಂದಾಗಿದ್ದಾರೆ. ತಾಯಿಯ ಹೊಟ್ಟೆಯ ಮೂಲಕ ಭ್ರೂಣದ ಹೃದಯಕ್ಕೆ ಸೂಜಿಯನ್ನ ಸೇರಿಸಿದ್ದಾರೆ. ಬಳಿಕ ಬಲೂನ್‌ ಕ್ಯಾತಿಟರ್ (balloon catheter) ‌ಅಂದ್ರೆ ಟೂಬ್‌ ಅಂಥ ರಚನೆಯಿರೊ ವಸ್ತು ಬಳಸಿ ಭ್ರೂಣದ ಹೃದಯದಲ್ಲಿ ಅಡಚಣೆ ಉಂಟುಮಾಡಿದ್ದ ಕವಾಟವನ್ನ ತೆರೆದು ರಕ್ತದ ಹರಿವಿಗೆ ದಾರಿ ಮಾಡಿಕೊಡಲಾಗಿದೆ. ಇದು ತುಂಬಾ ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದ್ದು, ಆಪರೇಶನ್‌ ಬಳಿಕ ಗರ್ಭಿಣಿ ಮಹಿಳೆ ಮತ್ತು ಗರ್ಭದಲ್ಲಿರುವ ಮಗು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply