ದೆಹಲಿ ಸರ್ಕಾರಕ್ಕೆ ಎಣ್ಣೆ ಬೆನ್ನಲ್ಲೇ ʻಫೇಕ್‌ ಔಷಧಿʼ ತಲೆನೋವು!

masthmagaa.com:

ಎಣ್ಣೆ ಹಗರಣ ವಿಚಾರವಾಗಿ ED ಅಧಿಕಾರಿಗಳು ದೆಹಲಿ ಸರ್ಕಾರವನ್ನ ಅಲ್ಲಾಡಿಸ್ತಿರೋ ಮಧ್ಯದಲ್ಲಿ ಇದೀಗ ಮತ್ತೊಂದು ವಿಚಾರವಾಗಿ ಕೇಂದ್ರ, ಕೇಜ್ರಿವಾಲ್ ಸರ್ಕಾರದ ಮೇಲೆ ಎರಗಿದೆ. ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಯೋಜನೆಯಾದ‌, ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಕಳಪೆ ಗುಣಮಟ್ಟದ ಔಷಧಗಳನ್ನ ನೀಡಲಾಗ್ತಿದೆ ಅನ್ನೋ ವಿಚಾರವಾಗಿ ತನಿಖೆ ನಡೆಸೋಕೆ CBI ಎಂಟ್ರಿ ಕೊಡಲಿದೆ. ಈ ವಿಚಾರವಾಗಿ ಗೃಹ ಸಚಿವಾಲಯ CBI ಗೆ ಜನವರಿ 5 ರಂದು ಆದೇಶಿಸಿದೆ. ಅಂದ್ಹಾಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಶಿಫಾರಸ್ಸು ಮೇರೆಗೆ ತನಿಖೆಗೆ ಆದೇಶಿಸಲಾಗಿದೆ. ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನಕಲಿ ಪೆತಾಲಜಿ ಮತ್ತು ರೆಡಿಯಾಲಜಿ ಟೆಸ್ಟ್‌ಗಳನ್ನ ಮಾಡಲಾಗ್ತಿದೆ. ರೋಗಿಗಳೇ ಇಲ್ದಿದ್ರೂ ಕೂಡ ಲಕ್ಷಗಟ್ಟಲೆ ಫೇಕ್‌ ಟೆಸ್ಟ್‌ಗಳನ್ನ ಮಾಡಿ, ಪ್ರೈವೇಟ್‌ ಲ್ಯಾಬ್‌ಗಳಿಗೆ ಸಹಾಯ ಮಾಡ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದ್ವು. ಸೋ ಕೇಂದ್ರ ಈ ಬಗ್ಗೆ ತನಿಖೆ ನಡೆಸೋಕೆ ಮುಂದಾಗಿದೆ. ಲಿಕ್ಕರ್‌ ಸ್ಕ್ಯಾಮ್‌ನಲ್ಲಿ ಸಮನ್ಸ್‌ ಮೇಲೆ ಸಮನ್ಸ್‌ ಪಡೀತಿರೋ ಕೇಜ್ರಿವಾಲ್‌ಗೆ ಮತ್ತೊಂದು ಶಾಕ್‌ ಕೊಟ್ಟಿದೆ.

-masthmagaa.com

Contact Us for Advertisement

Leave a Reply