ದಿಲ್ಲಿ ರಸ್ತೆ ಅಪಘಾತದ ಕುರಿತು ಮತ್ತಷ್ಟು ಮಾಹಿತಿ ಬಯಲು! ಮೃತ ಯುವತಿಯ ಗೆಳತಿ ಹೇಳಿದ್ದೇನು?

masthmagaa.com:

ನೆನ್ನೆ ದೆಹಲಿಯಲ್ಲಿ ನಡೆದ ಭಯಾನಕ ರಸ್ತೆ ಅಪಘಾತದಲ್ಲಿ ಕಾರ್‌ನಲ್ಲಿದ್ದ ಯುವಕರು ಕುಡಿದ ಮತ್ತಿನಲ್ಲಿ ಸ್ಕೂಟಿಗೆ ಗುದ್ದಿ, ನಂತ್ರ ಮಹಿಳೆಯನ್ನ 12 ಕಿಲೋಮೀಟರ್‌ ಎಳೆದುಕೊಂಡು ಹೋಗಿದ್ರು. ಇದೀಗ ಕೇಸ್‌ಗೆ ಸಂಬಂಧಿಸಿದಂತೆ ಕೆಲ ವಿಷಯಗಳು ಹೊರಬರ್ತಿವೆ. ಘಟನೆ ನಡೆದ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಇಬ್ಬರು ಯುವತಿಯರಿದ್ರು ಸಿಸಿಟಿವಿ ಫೂಟೇಜ್‌ನಿಂದ ತಿಳಿದುಬಂದಿದೆ. ಅಪಘಾತದಲ್ಲಿ ಓರ್ವ ಯುವತಿಗೆ ಸ್ವಲ್ಪ ಗಾಯಗಳಾಗಿದ್ದು, ಇನ್ನೋರ್ವ ಯುವತಿ ಕಾರಿನ ಚಕ್ರಕ್ಕೆ ಸಿಲುಕಿದ್ದನ್ನ ನೋಡಿ ಈಕೆ ಅಲ್ಲಿಂದ ಓಡಿ ಹೋಗಿರೋದಾಗಿ ಹೇಳಿದ್ದಾಳೆ ಅಂತ ಪೊಲೀಸರು ಹೇಳಿದ್ದಾರೆ. ಜೊತೆಗೆ ಇದು ಕೇವಲ ಹಿಟ್‌ ಅಂಡ್‌ ರನ್‌ ಕೇಸ್‌ ಅಲ್ಲ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರ್ಬೋದು ಅಂತ ಅನುಮಾನ ವ್ಯಕ್ತ ಪಡಿಸಲಾಗಿತ್ತು. ಆದ್ರೆ ಪೋಸ್ಟ್‌ ಮಾರ್ಟ್‌ಮ್‌ ವರದಿಯಲ್ಲಿ ಆ ರೀತಿ ಯಾವುದೇ ಸಾಕ್ಷಿ ಸಿಕ್ಕಿಲ್ಲ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply