ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೋ! ವ್ಯಕ್ತಿಯೊಬ್ಬನ ಅರೆಸ್ಟ್‌!

masthmagaa.com:

ನ್ಯಾಷನಲ್‌ ಕ್ರಶ್‌ ಅಂತಲೇ ಫೇಮಸ್‌ ಆಗಿರೋ ನಟಿ ರಶ್ಮಿಕಾ ಮಂದಣ್ಣ ಅವ್ರ ಡೀಪ್‌ಫೇಕ್‌ ವಿಡಿಯೋ ಸಂಬಂಧ ಇದೀಗ ವ್ಯಕ್ತಿಯೊಬ್ಬನನ್ನ ದೆಹಲಿ ಪೊಲೀಸರು ಆಂಧ್ರ ಪ್ರದೇಶದಲ್ಲಿ ಅರೆಸ್ಟ್‌ ಮಾಡಿದ್ದಾರೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ರಶ್ಮಿಕಾ ಮಂದಣ್ಣ ಅವ್ರ ಡೀಪ್‌ಫೇಕ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಾದ ನಂತ್ರ ದೆಹಲಿ ಪೊಲೀಸ್‌ ಈ ವಿಚಾರವಾಗಿ ಕೇಸ್‌ ಫೈಲ್‌ ಮಾಡಿದ್ರು. AI ಬಳಸಿ ತಮ್ಮ ಮೇಲೆ ಅಸಹ್ಯವಾಗಿ ಡೀಪ್‌ಫೇಕ್‌ ವಿಡಿಯೋ ಕ್ರಿಯೇಟ್‌ ಮಾಡಿರೋ ಬಗ್ಗೆ ರಶ್ಮಿಕಾ ಕೂಡ ಬೇಸರ ವ್ಯಕ್ತಪಡಿಸಿದ್ರು. ಇದಾದ್ಮೇಲೆ ಹಲವಾರು ಸೆಲೆಬ್ರಿಟಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಇದೀಗ ರಶ್ಮಿಕಾ ಪ್ರಕರಣದ ಆರೋಪಿ ಸಿಕ್ಕಿಬಿದ್ದಿದ್ದಾನೆ.

-masthmagaa.com

Contact Us for Advertisement

Leave a Reply