ಕುಸ್ತಿ ಪಟುಗಳಿಗೆ ಬ್ರಿಜ್‌ ಭೂಷಣ್‌ ಬೆದರಿಕೆ ಹಾಕಿದ್ರು: ಪೊಲೀಸ್‌

masthmagaa.com:

ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಕುಸ್ತಿ ಪಟುಗಳಿಗೆ ಬೆದರಿಕೆ ಹಾಕಿದ್ರು ಅಂತ ದೆಹಲಿ ಪೊಲೀಸರು ಹೇಳಿದ್ದಾರೆ. ಲೈಂಗಿಕ ಕಿರುಕುಳ ಕೇಸ್ ವಿಚಾರಣೆ ವೇಳೆ ಕೋರ್ಟ್‌ ಮುಂದೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ. ʻನೀವು ಕುಸ್ತಿಯಲ್ಲಿ ಮುಂದುವರಿಬೇಕು ಅಂದ್ರೆ ಬಾಯಿ ಮುಚ್ಕೊಂಡಿರಿ. ನನಗೆ ಒಬ್ಬರ ಕೆರಿಯರನ್ನ ರೂಪಿಸೋದು ಗೊತ್ತು, ಹಾಳು ಮಾಡೋದು ಗೊತ್ತುʼ ಅಂತ ಕುಸ್ತಿ ಪಟುಗಳಿಗೆ ಬ್ರಿಜ್‌ ಭೂಷಣ್ ಬೆದರಿಕೆ ಹಾಕಿದ್ರು ಅಂತ ಪೊಲೀಸರು ಹೇಳಿದ್ದಾರೆ.‌ ಅಲ್ಲದೆ ಮಹಿಳಾ ಕುಸ್ತಿ ಪಟುಗಳ ಬಳಿ, ನಾನು ಧೋತಿ, ಕುರ್ತಾದಲ್ಲಿ ಹೇಗ್‌ ಕಾಣಿಸ್ತಿದ್ದೀನಿ? ಅಂತ ಕೇಳಿದ್ರು. ಅಲ್ಲದೆ ಈ ಕೇಸ್‌ನ ಮತ್ತೊಬ್ಬ ಆರೋಪಿ, WFI ಸಹಾಯಕ ಕಾರ್ಯದರ್ಶಿಯಾಗಿದ್ದ ವಿನೋದ್‌ ತೋಮರ್‌ ಮೇಲೂ ಇನ್ನೊಂದು ಆರೋಪ ಕೇಳಿಬಂದಿದೆ. ವಿನೋದ್‌ ತೋಮರ್‌ ಆಫಿಸ್‌ಗೆ ಕೇವಲ ಮಹಿಳೆಯರಿಗೆ ಮಾತ್ರ ಎಂಟ್ರಿ ಇತ್ತಂತೆ. ಪುರುಷ ಕುಸ್ತಿ ಪಟುಗಳನ್ನ ಒಳಗೆ ಬಿಡ್ತಿರ್ಲಿಲ್ಲ ಅಂತ ಕೋರ್ಟ್‌ ಮುಂದೆ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply