ಸಂಸತ್‌ ಭದ್ರತಾ ಲೋಪ ಕೇಸ್‌: ಆರೋಪಿಗಳಿಗೆ ಪಾಲಿಗ್ರಾಫ್‌ ಟೆಸ್ಟ್!

masthmagaa.com:

ಡಿಸೆಂಬರ್‌ 13ರ ಸಂಸತ್‌ ಭದ್ರತಾ ಲೋಪದಡಿಯಲ್ಲಿ ಬಂಧಿಸಲಾಗಿರೋ ಆರೋಪಿಗಳಿಗೆ ಪಾಲಿಗ್ರಾಫ್‌ ಟೆಸ್ಟ್‌ ಮಾಡ್ಬೇಕು ಅಂತ ದೆಹಲಿಯ ಪಟಿಯಾಲ ಕೋರ್ಟ್‌ಗೆ ದೆಹಲಿ ಪೋಲಿಸರ ವಿಶೇಷ ವಿಭಾಗ ಮನವಿ ಸಲ್ಲಿಸಿದೆ. ಪಾಲಿಗ್ರಾಪ್‌ ಟೆಸ್ಟ್‌ ಅಂದ್ರೆ ವಿಚಾರಣೆ ವೇಳೆ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಆರೋಪಿಗಳು ಸರಿಯಾದ ಉತ್ತರ ಕೊಡ್ರಿದ್ದಾರ ಅಂತ ಪರೀಕ್ಷೆ ಮಾಡೋ ವಿಧಾನ.‌ ಲೈ ಡಿಟೆಕ್ಟರ್‌ ಮಷಿನ್‌ ಅನ್ಬೋದು. ಪ್ರಶ್ನೆಗಳಿಗೆ ಆರೋಪಿ ಉತ್ತರಿಸುವಾಗ ಅವನ ಹಾರ್ಟ್‌ ರೇಟ್‌, ಬ್ಲಡ್‌ ಪ್ರೆಶರ್‌ ಹಾಗೂ ಉಸಿರಾಟ ಸೇರಿದಂತೆ ಫಿಸಿಕಲ್‌ ರೆಸ್ಪಾನ್ಸ್‌ನ್ನ ಸ್ಟಡಿ ಮಾಡಲಾಗತ್ತೆ. ಇನ್ನು ಜನವರಿ 2 ರಂದು ಈ ಕೇಸ್‌ನ ವಿಚಾರಣೆ ನಡೆಯಲಿದೆ. ಇನ್ನು ಈ ಕೃತ್ಯದ ಮಾಸ್ಟರ್‌ ಮೈಂಡ್‌ ಲಲಿತ್ ಝಾನ ನ್ಯಾಯಾಂಗ ಬಂಧನದ ಅವಧಿಯನ್ನ ಜನವರಿ 5 ರವರೆಗೆ ವಿಸ್ತರಿಸಲಾಗಿದೆ.

-masthmagaa.com

Contact Us for Advertisement

Leave a Reply