ದಿಲ್ಲಿ-ಪಂಜಾಬ್‌ ಸರ್ಕಾರಗಳ ಮಧ್ಯೆ ಜ್ಞಾನ-ಹಂಚಿಕೆ; ಕಿಡಿಕಾರಿದ ವಿಪಕ್ಷಗಳು

masthmagaa.com:

ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮತ್ತು ಪಂಜಾಬ್‌ ಸಿಎಂ ಭಗವಂತ್‌ ಮನ್‌ ಇವತ್ತು ನಾಲೆಜ್‌ ಶೇರಿಂಗ್‌ ಅಂದ್ರೆ ಜ್ಞಾನ ಹಂಚಿಕೆ ಒಪ್ಪಂದ ಒಂದಕ್ಕೆ ಸಹಿ ಹಾಕಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್‌ ಪಂಜಾಬ್‌ ಸರ್ಕಾರದ ಆದ್ಯತೆಗಳಾಗಿದ್ದು ಈ ಕ್ಷೇತ್ರಗಳ ಬಗ್ಗೆ ಪಂಜಾಬ್‌ ದೆಹಲಿಯಿಂದ ಕಲಿಯಲಿದೆ ಅಂತ ಭಗವಂತ್‌ ಮನ್‌ ಹೇಳಿದ್ದಾರೆ. ಜೊತೆಗೆ ಪಂಜಾಬ್‌ನಲ್ಲಿ 117 ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನ ಅಭಿವೃದ್ಧಿಪಡಿಸೋದಾಗಿ ಅನೌನ್ಸ್‌ ಮಾಡಿದ್ದಾರೆ. ಇನ್ನು ಅರವಿಂದ್‌ ಕೇಜ್ರಿವಾಲ್‌ ಮಾತಾಡಿ ಪಂಜಾಬ್‌ನಿಂದ ನಾವು ಕೃಷಿ ಬಗ್ಗೆ ಕಲಿತುಕೊಳ್ತೇವೆ. ಇದೇ ರೀತಿ ಪ್ರತಿಯೊಂದು ರಾಜ್ಯಗಳು ಒಬ್ಬರಿಂದ ಇನ್ನೊಬ್ರು ಕಲಿತ್ರೆ ಮಾತ್ರ ಭಾರತ ಅಭಿವೃದ್ಧಿ ಹೊಂದುತ್ತೆ. ನಾವೊಬ್ರೆ ಒಳ್ಳೆ ಕೆಲ್ಸ ಮಾಡಿದ್ದೀವಿ ಅಂದ್ರೆ ತಪ್ಪಾಗುತ್ತೆ. ದೇಶಾದ್ಯಂತ ಹಲವು ರಾಜ್ಯಗಳು ಒಂದೊಂದು ಕ್ಷೇತ್ರದಲ್ಲಿ ಯಶಸ್ಸು ಗಳಿಸಿವೆ ಆದ್ರೆ ಪಕ್ಷಭೇದದಿಂದ ಏನನ್ನೂ ಕಲಿತಾ ಇಲ್ಲ ಅಂತ ಹೇಳಿದ್ದಾರೆ. ಇನ್ನು ಇದಕ್ಕೆ ಪಂಜಾಬ್‌ನ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಭಗವಂತ್‌ ಮನ್‌ ಅಧಿಕಾರ ಹಸ್ತಕ್ಷೇಪವನ್ನ ಕಾನೂನುಬದ್ಧಗೊಳಿಸ್ತಾ ಇದೆ ಅಂತ ಕಿಡಿಕಾರಿವೆ. ಇದಕ್ಕೆ ಪ್ರತಿಕ್ರಿಯಿಸಿರೋ ಕೇಜ್ರಿವಾಲ್‌, ದಿಲ್ಲಿ ಶಿಕ್ಷಣಮಂತ್ರಿ ಮನೀಷ್‌ ಸಿಸೋಡಿಯಾ ಶಿಕ್ಷಣ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಫಿನ್ಲೆಂಡ್‌ಗೆ ಹೋಗಿದ್ರು. ಹಾಗಾದ್ರೆ ದಿಲ್ಲಿಯನ್ನ ಫಿನ್ಲೆಂಡ್‌ ನಡೆಸ್ತಾ ಇದೆ ಅಂತ ಹೇಳೋಕಾಗುತ್ತಾ ಅಂತ ವ್ಯಂಗ್ಯವಾಡಿದ್ದಾರೆ.

-masthmagaa.com

Contact Us for Advertisement

Leave a Reply