ನ್ಯಾಟೋಗೆ ಸೇರ್ಪಡೆಗೆ ಇವತ್ತೇ ಬಿಡ್? ಈಗೇನ್ಮಾಡ್ತಾರೆ ಪುಟಿನ್?

masthmagaa.com:

ರಷ್ಯಾದ ಬೆದರಿಕೆ, ಟರ್ಕಿಯ ವಿರೋಧದ ನಡುವೆಯೂ ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ನ್ಯಾಟೋ ಸೇರ್ಪಡೆಗೆ ಇವತ್ತು ಅರ್ಜಿ ಸಲ್ಲಿಸಿವೆ. ಇದು ಐತಿಹಾಸಿಕ ಹೆಜ್ಜೆಯಾಗಿದೆ. ನ್ಯಾಟೋ ಕಡೆಗೆ ನಿಮ್ಮ ಮುಂದಿನ ಹೆಜ್ಜೆಯನ್ನ ಮಿತ್ರರಾಷ್ಟ್ರಗಳು ಪರಿಗಣಿಸಿತ್ತಾರೆ ಅಂತ ನ್ಯಾಟೋ ಮುಖ್ಯಸ್ಥ ಜೆನ್ಸ್‌ ಸ್ಟೋಲನ್‌ಬರ್ಗ್‌ ಹೇಳಿದ್ದಾರೆ. ಇನ್ನು ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಸ್ವೀಡನ್‌ ಪ್ರಧಾನಿ ಮ್ಯಾಗ್ದಲೇನಾ ಆಂಡ್ರಸೆನ್‌ ʻನಮಗೆ ತುಂಬಾ ಸಂತೋಷವಾಗುತ್ತಿದೆ. ನಾವು ಒಂದೇ ಹಾದಿಯಲ್ಲಿ ಒಂದೇ ಕಡೆ ಒಟ್ಟಿಗೆ ಸೇರ್ತಾ ಇದ್ದೀವಿ ಅಂತ ಹರ್ಷ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply