ಈಕ್ವೆಡಾರ್‌ ಹಾಗೂ ಪೆರುವಿನಲ್ಲಿ ಪ್ರಬಲ ಭೂಕಂಪ! 6.8 ತೀವ್ರತೆ ದಾಖಲು!

masthmagaa.com:

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಉಂಟಾದ ವಿನಾಶವನ್ನು ಮರೆಯುವ ಮುನ್ನವೇ, ಈಕ್ವಡಾರ್‌ ಮತ್ತು ಪೆರುವಿನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್‌ ಸ್ಕೇಲ್‌ನಲ್ಲಿ 6.8 ತೀವ್ರತೆ ದಾಖಲಾಗಿದೆ. ಈಕ್ವಡಾರ್‌ನಲ್ಲಿ ಇಲ್ಲಿಯವರೆಗೂ ಭೂಕಂಪದಿಂದ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಭೂಕಂಪದಿಂದ ಹಲವು ಕಟ್ಟಡಗಳು ಹಾನಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಪೆರುವಿನಲ್ಲಿ ಭೂಕಂಪದ ಅನುಭವವಾಗಿದ್ದು, ಅಷ್ಟೇನು ಹಾನಿ ಸಂಭವಿಸಿಲ್ಲ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply