ಭಾರತೀಯ ಏರ್‌ಲೈನ್ಸ್‌ಗೆ DGCA ಕಡೆಯಿಂದ ಹೊಸ ಮಾರ್ಗಸೂಚಿ!

masthmagaa.com:

ವಿಮಾನದಲ್ಲಿ ಹಾರಾಟ ಮಾಡೋರು ಎಕ್ಸ್ಟ್ರಾ ಹಣ ನೀಡಿ ಸೀಟ್‌ ಸೆಲೆಕ್ಷನ್‌ ಮಾಡಿಲ್ಲಾಂದ್ರೆ, ಕೆಲವೊಮ್ಮೆ ಪೋಷಕರು ಮತ್ತು ಮಕ್ಕಳು ಬೇರೆ ಬೇರೆ ಕೂರಬೇಕಾದ ಪರಿಸ್ಥಿತಿ ಬರುತ್ತೆ. ಈ ಬಗ್ಗೆ ಪ್ಯಾಸೆಂಜರ್‌ಗಳ ಕಡೆಯಿಂದ ಸಾಕಷ್ಟು ಬಾರಿ ಕಂಪ್ಲೈಂಟ್ಸ್‌ ಕೇಳಿ ಬಂದಿದ್ವು. ಸೋ ಇದೀಗ ಡೈರೆಕ್ಟೋರೇಟ್‌ ಜನರಲ್‌ ಆಫ್‌ ಸಿವಿಲ್‌ ಏವಿಯೇಷನ್‌ (DGCA), ಇನ್ಮುಂದೆ ಸೀಟ್‌ ಸೆಲೆಕ್ಷನ್‌ ಮಾಡದಿದ್ರೂ 12 ವರ್ಷದವರೆಗಿನ ಮಕ್ಕಳನ್ನ ಪೋಷಕರೊಂದಿಗೆ ಕೂರಿಸಬೇಕು ಅಂತ ಏರ್‌ಲೈನ್ಸ್‌ಗೆ ನಿರ್ದೇಶಿಸಿದೆ.

-masthmagaa.com

Contact Us for Advertisement

Leave a Reply