ಧನ್ವೀರ್ ಮುಂದಿನ ಸಿನಿಮಾಗೆ ಟೈಟಲ್ ಫಿಕ್ಸ್: ಫಸ್ಟ್ ಲುಕ್ ಬದಲು ‘ಗೆಸ್’ ಲುಕ್ ಪೋಸ್ಟರ್ ರಿಲೀಸ್ ಮಾಡಿದ ‘ಕೈವ’ ಚಿತ್ರತಂಡ!

masthmagaa.com:

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಮುಂದಿನ ಸಿನಿಮಾಗೆ ‘ಕೈವ’ ಎನ್ನುವ ವಿಶೇಷವಾದ ಶೀರ್ಷಿಕೆ ಇಡಲಾಗಿದೆ. ಧನ್ವೀರ್ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಾ ಇದ್ದಾರೆ. ಅಭುವನಸ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಒಂದು ಗೆಸ್ ಲುಕ್ ಅನ್ನ ಈ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಗೆಸ್ ಲುಕ್ ಚಿತ್ರದ‌ ಮೇಲೆ‌ ವಿಶೇಷವಾದ ಕುತೂಹಲ‌ವನ್ನ ಹುಟ್ಟಿಸ್ತಿದೆ.

ಕೈವ 1983 ಅನ್ಮೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿ ಕಾಣ್ತಿರೋ ಈ ಪೋಸ್ಟರ್ ನಾನಾ ಕಥೆಗಳನ್ನ ಹೇಳ್ತಿದೆ. ನೈಜ ಘಟನೆಗಳನ್ನಾಧಿರಿಸಿದ ಸಿನಿಮಾ ಅಂತ ಹೇಳಲಾಗ್ತಿರೋ ಕೈವ ಟೀಮ್‌. ಫಸ್ಟ್ ಲುಕ್ ಪೋಸ್ಟರ್ ಗಿದು ಗೆಸ್‌ಲುಕ್ ಅಂತ ಬಿಟ್ಟು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಅಂದಹಾಗೆ ಸೆಪ್ಟೆಂಬರ್ 8ನೇ ತಾರೀಖು ನಾಯಕ ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಕೈವನ ಅಸಲಿ ಲುಕ್ ರಿವೀಲ್ ಆಗಲಿದೆ.ಅಂದ್ರೆ ಕೈವ ಚಿತ್ರದ ಅಫೀಶಿಯಲ್ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಲಾಗ್ತಿದೆ. ಅವತ್ತೇ ಈ ಗೆಸ್ ಪೋಸ್ಟರ್ ಹುಟ್ಟಿಸಿರೋ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ.

-masthmagaa.com

Contact Us for Advertisement

Leave a Reply