ಕಾಂಗ್ರೆಸ್‌ ಅಧಿಕಾರ ತ್ಯಜಿಸಿ ಸೋನಿಯಾ ಗಾಂಧಿ ಹೇಳಿದ್ದೇನು ನೋಡಿ!

masthmagaa.com:

ದೇಶದ ಪುರಾತನ ಪಕ್ಷ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಇಂದು ಕನ್ನಡಿಗ ಮಲ್ಲಿಕಾರ್ಜುನಾ ಖರ್ಗೆ ಅಧಿಕಾರ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ಅಧಿಕಾರಿವನ್ಜೆಲ್ಲಾ ಖರ್ಗೆಯವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಮೂಲಕ 24 ವರ್ಷಗಳ ನಂತರ ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಅಧ್ಯಕ್ಷಗಿರಿ ದೂರವಾಗಿದೆ. ಇನ್ನು ಅಧಿಕಾರ ಸ್ವೀಕರಿಸೋಕೂ ಮುಂಚೆ ಖರ್ಗೆಯವರು ರಾಷ್ಟ್ರಪಿತ ಮಹಾತ್ಮ ಗಾಂಧಿ, ನೆಹರು, ಶಾಸ್ತ್ರಿ ಜೀ, ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿ ಎಲ್ಲರ ಸಮಾಧಿಗೆ ನಮನ ಸಲ್ಲಿಸಿದ್ರು. ಇನ್ನು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಇಂದು ಒಬ್ಬ ಕೆಲಸಗಾರನ ಮಗ, ಕಾಂಗ್ರೆಸ್ ಕಾರ್ಯಕರ್ತ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ನನ್ನ ಕೆಲಸ, ನನ್ನ ಅನುಭವದೊಂದಿಗೆ ಪಕ್ಷವನ್ನು ಮೇಲಕ್ಕೆತ್ತಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಮಹಾತ್ಮಾ ಗಾಂಧಿ, ನೆಹರೂ ಹಾಗೂ ಸುಭಾಷ್‌ ಚಂದ್ರ ಬೋಸ್‌, ಪಟೇಲ್‌, ಇಂದಿರಾ ಗಾಂಧಿಯಂತಹ ಮಹಾನ್‌ ನಾಯಕರು ನೇತೃತ್ವ ವಹಿಸಿದ್ದ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವುದು ಅದೃಷ್ಟ ಮತ್ತು ಹೆಮ್ಮೆಯ ವಿಷಯ ಅಂತ ಹೇಳಿದ್ರು. ಜೊತೆಗೆ ಸಂಕಷ್ಟದ ಸಮಯದಲ್ಲಿ ಪಕ್ಷವನ್ನ ಮುನ್ನೆಡೆಸಿದ್ದಕ್ಕಾಗಿ ಸೋನಿಯಾ ಗಾಂಧಿಗೆ ಧನ್ಯವಾದ ಅಂತ ಹೇಳಿದ್ರು. ಇನ್ನು ಸೋನಿಯಾ ಗಾಂಧಿ ಮಾತನಾಡಿ, ನಾನು ಎಲ್ಲರಿಗೂ ಕೃತಜ್ಞಳಾಗಿದ್ದೀನಿ. ಅದಕ್ಕಿಂತ ಹೆಚ್ಚಾಗಿ ನಿರಾಳವಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನವನ್ನು ಕೊನೆಯ ಉಸಿರು ಇರುವವರೆಗೂ ಸ್ಮರಿಸುತ್ತೇನೆ. ನನ್ನ ಹೆಗಲ ಮೇಲಿದ್ದ ಈ ಜವಾಬ್ದಾರಿಯ ಹೊರೆ ಕಡಿಮೆಯಾಗಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಕೆಲಸ ಮಾಡಿದ್ದೀನಿ. ಹೊಸ ಅಧ್ಯಕ್ಷರಿಗೆ ಶುಭವಾಗಲಿ ಅಂತ ಹೇಳಿದ್ದಾರೆ. ಇನ್ನು ಇದಾದ ಬಳಿಕ ಕಾಂಗ್ರೆಸ್‌ ನಾಯಕರು ಸಭೆ ಮಾಡಿದ್ದಾರೆ. ವಿಶೇಷವಾಗಿ ಭಾರತ್‌ ಜೋಡೋ ಯಾತ್ರೆ ಬಗ್ಗೆ ಚರ್ಚೆ ಮಾಡಲಾಗಿದೆ ಅಂತ ಹೇಳಲಾಗ್ತಿದೆ. ಇನ್ನು ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೇಸ್‌ ಜವಾಬ್ದಾರಿ ಯಾರಿಗೆ ಡಿಕೆಶಿಗೋ ಅಥವಾ ಸಿದ್ದರಾಮಯ್ಯಗೋ ಅನ್ನೋ ಬಗ್ಗೆ ಕೂಡ ವೇಣುಗೋಪಾಲ್‌ ನೇತೃತ್ವದಲ್ಲಿ ಚರ್ಚೆಯಾಗಿದೆ. ಈ ಪೈಕಿ 50-50 ಹಂಚಿಕೆ ಅಂದ್ರೆ ಅರ್ಧರ್ಧ ಕ್ಷೇತ್ರಗಳ ಉಸ್ತುವಾರಿಯನ್ನ ಇಬ್ಬರೂ ನೋಡಿಕೊಳ್ಳೋದಕ್ಕೆ ಸೂಚನೆ ನೀಡಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ. ಇನ್ನು ಸಿದ್ದರಾಮಯ್ಯ ಬಣ ಏಕಾಂಗಿಯಾಗಿ ಅಂದ್ರೆ ಡಿಕೆಶಿಯನ್ನ ಬಿಟ್ಟು ಬಸ್‌ ಯಾತ್ರೆ ಮಾಡೋಕೆ ತಯಾರಿ ಮಾಡ್ತಿತ್ತು. ಈ ಸಂದರ್ಭದಲ್ಲೇ ಇದಕ್ಕೆ ಹಲವು ನಾಯಕರು ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ರು. ಹೀಗಾಗಿ ಚುನಾವಣೆಗೆ ಸಾಮೂಹಿಕ ನಾಯಕತ್ವ ಇರಲಿ ಅನ್ನೋ ಬಗ್ಗೆ ಚೂಚಿಸಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply