ಮಾಲ್ಡೀವ್ಸ್‌ನಲ್ಲಿ ಚೀನಿ ಹಡಗುಗಳ ಸಂಶೋಧನೆಗೆ ಬ್ರೇಕ್!

masthmagaa.com:

ನಮ್ಮ ಜಲ ಪ್ರದೇಶದಲ್ಲಿ ಚೀನಿ ಹಡಗುಗಳಿಗೆ ಸಂಶೋಧನೆ ನಡೆಸಲು ಅನುಮತಿ ನೀಡಿಲ್ಲ. ಹೀಗಂತ ಅಚ್ಚರಿ ಅನ್ನೊ ಹಾಗೆ ಚೀನಾದ ಪರಮ ಆಪ್ತ ಮಾಲ್ಡೀವ್ಸ್‌ ಹೇಳಿದೆ. ಯೆಸ್‌.. ಹಿಂದೂ ಮಹಾ ಸಾಗರದಲ್ಲಿ ಭಾರತ ಸೇರಿದಂತೆ ಇತರ ದೇಶಗಳ ಶಾಂತಿ ಮತ್ತು ಭದ್ರತೆಗಳ ವಿಚಾರದ ಬಗ್ಗೆ ಮಾತಾಡಿರೊ ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್‌ ಈ ಹೇಳಿಕೆ ನೀಡಿದ್ದಾರೆ. ಚೀನಾದ ಷಿಯಾಂಗ್‌ ಯಾಂಗ್ ಹಾಂಗ್‌ 3 ಅನ್ನೊ ಸಮುದ್ರ ಸಂಶೋಧನಾ ಹಡಗು ಎರಡೇ ತಿಂಗಳಲ್ಲಿ ಮತ್ತೆ ಮಾಲ್ಡೀವ್ಸ್‌ನ ಜಲ ಪ್ರದೇಶಕ್ಕೆ ಬಂದಿರೊ ಹೊತ್ತಲ್ಲೆ ಮೂಸಾ ಈ ಹೀಗೆ ಹೇಳಿದ್ದಾರೆ. ಅಲ್ಧೆ ಶಾಂತಿಯ ವಿಚಾರವಾಗಿ ನಮ್ಮ ದೇಶಕ್ಕೆ ಬರೋ ಹಡಗುಗಳನ್ನ ನಾವು ಸ್ವಾಗತಿಸ್ತೇವೆ. ಆದ್ರೆ ಅದು ಬಿಟ್ಟು ನಮ್ಮ ಜಲ ಪ್ರದೇಶದಲ್ಲಿ ಸಂಶೋಧನೆಗೆಲ್ಲ ಚೀನಾ ಹಡಗಿಗೂ ಅನುಮತಿ ನೀಡಿಲ್ಲ. ಹಾಗೇ ಚೀನಾ ಹಡಗು ಸಂಶೋಧನೆ ನಡೆಸೊಕೆ ಬಂದಿಲ್ಲ ಅಂತ ಮೂಸಾ ಹೇಳಿದ್ದಾರೆ. ಈ ಮೂಲಕ ಚೀನಾದತ್ತ ವಾಲಾದ್ದ ಮಾಲ್ಡೀವ್ಸ್‌ ಈಗ ಚೀನಾ ವಿರುದ್ದವೇ ಮಾತಾಡ್ತಿರೊದು ಸದ್ಯ ತೀವ್ರ ಚರ್ಚೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply