ಬಸ್‌ನಲ್ಲಿ ಡಿಕೆಶಿ ಸಿಟಿ ರೌಂಡ್ಸ್‌!

masthmagaa.com:

ಬೆಂಗಳೂರು ‌ನಗರದಲ್ಲಿ‌ ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಡಿಸಿಎಂ ಡಿಕೆ ಶಿವಕುಮಾರ್ ಇಂದು ನಗರದ ಹಲವು ಪ್ರದೇಶಗಳಲ್ಲಿ ಸಿಟಿ ರೌಂಡ್ಸ್ ನಡೆಸಿದ್ದಾರೆ. 11 ಗಂಟೆಗೆ BDAಯಿಂದ ಸಿಟಿ ಪ್ರದಕ್ಷಿಣೆಗೆ ಹೊರಟ ಡಿಕೆಶಿ, ಅಧಿಕಾರಿಗಳ ಜೊತೆಗೆ ಬಸ್‌ನಲ್ಲೇ ಪ್ರದಕ್ಷಿಣೆ ಮಾಡಿದ್ದಾರೆ. ಈ ವೇಳೆ ದಿವ್ಯಶ್ರೀ ರಾಜಕಾಲುವೆ ಒತ್ತುವರಿ ಬಗ್ಗೆ ಗರಂ ಆಗಿದ್ದಾರೆ. 12 ಮೀಟರ್​ ರಾಜಕಾಲುವೆಯ ಜಾಗದಲ್ಲಿ 7 ಮೀಟರ್​​ ಒತ್ತುವರಿ ಮಾಡಿಕೊಳ್ಳಲಾಗಿದೆ. ಹೀಗೆ ಇದ್ದರೆ ಮಳೆ ವೇಳೆ ಪ್ರವಾಹ ಉಂಟಾಗಿ ಮತ್ತೆ ಸಮಸ್ಯೆ ಆಗುತ್ತೆ. ಕೂಡಲೇ ಒತ್ತುವರಿ ಜಾಗ ತೆರವುಗೊಳಿಸಿ ರಾಜಕಾಲುವೆ ನಿರ್ಮಿಸೋಕೆ ಬಿಬಿಎಂಪಿ ಆಯುಕ್ತರಿಗೆ ಡಿಕೆಶಿ​​ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಮಾತಾಡಿದ ಅವ್ರು, ದಿವ್ಯಶ್ರೀ ಅಪಾರ್ಟ್‌ಮೆಂಟ್‌ ಇರಲಿ, ಡಿಕೆಶಿ ಅಪಾರ್ಟ್‌ಮೆಂಟ್‌ ಇರಲಿ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ. ನೀರು ಹರಿಯಲು ರಾಜಕಾಲುವೆ ಅಗಲ ಎಷ್ಟಿದೆ ಅದನ್ನ ಬಿಡಬೇಕು. ನೋಟಿಸ್‌ ಏನೂ ಕೊಡಲ್ಲ. ನೋಟಿಸ್‌ ಕೊಟ್ರೆ, ಸ್ಟೇ ತರ್ತಾರೆ. ಒತ್ತುವರಿ ವಿಚಾರದಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ ನಿಲ್ಲಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply