ಚೆನೈ: ಒಂದೇ ಗಂಟೆಯಲ್ಲಿ 29 ಜನರಿಗೆ ಕಚ್ಚಿದ ಬೀದಿ ನಾಯಿ!

masthmagaa.com:

ಬೀದಿ ನಾಯಿಯೊಂದು ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 29 ಜನರಿಗೆ ಕಚ್ಚಿರೋ ಘಟನೆ ಚೆನೈನ ರೋಯಾಪುರಂನಲ್ಲಿ ನಡೆದಿದೆ. ಮಂಗಳವಾರದಂದು ಸಂಜೆ ಹೊತ್ತಲ್ಲಿ ಬೀದಿ ನಾಯಿಯೊಂದು ಏಕಾಏಕಿ ರೋಡ್‌ ಮೇಲೆ ನಡ್ಕೊಂಡ್‌ ಹೋಗ್ತಿರೋರ ಕಾಲಿಗೆ ಕಚ್ಚಿ ಗಾಯ ಮಾಡಿರೋದು ವರದಿಯಾಗಿದೆ. ನಾಯಿಯಿಂದ ಕಚ್ಚಿಸಿಕೊಂಡ ಒಟ್ಟು 29 ಜನರಲ್ಲಿ, 24 ಜನರಿಗೆ ಡೀಪ್‌ ಕಟ್‌ ಆಗಿ ಬ್ಲೀಡಿಂಗ್‌ ಆಗಿದೆ. ಈ ಮೂಲಕ ನಾಯಿಯ ಲಾಲಾರಸ ಕೂಡ ಟ್ರಾನ್ಸ್ಫರ್‌ ಆಗಿರೋ ಚಾನ್ಸಸ್‌ ಇದೆ ಅಂತ ಹೇಳಲಾಗ್ತಿದೆ. ಈ ರೀತಿ ಸಿಕ್ಕಾಪಟ್ಟೆ ಅಗ್ರೆಸ್ಸಿವ್‌ ಆಗಿ ಕಚ್ಚಿರೋ ನಾಯಿಗೆ ರೇಬೀಸ್‌ ಸೋಂಕು ತಗುಲಿರಬೋದು ಅಂತ ಅಲ್ಲಿನ ಲೋಕಲ್ಸ್‌ ಸೇರ್ಕೊಂಡು ನಾಯಿಯನ್ನ ಹೊಡೆದು ಸಾಯಿಸಿದ್ದಾರೆ. ಅಂದ್ಹಾಗೆ ಇದ್ರಿಂದ ಗಾಯಗೊಂಡವ್ರನ್ನ ಹತ್ತಿರದ ಹಾಸ್ಪಿಟಲ್‌ಗೆ ಕರ್ಕೊಂಡ್‌ ಹೋಗಿ ರೇಬೀಸ್‌ ನಿವಾರಿಸೋ ಟ್ರೀಟ್‌ಮೆಂಟ್‌ ಕೊಡಲಾಗಿದೆ. ಇನ್ನು ಗ್ರೇಟರ್‌ ಚೆನೈ ಕಾರ್ಪೋರೇಷನ್‌ ಏರಿಯಾದಲ್ಲಿರೋ 32 ಬೀದಿ ನಾಯಿಗಳನ್ನ ಹುಡುಕಿ, ಅವುಗಳಿಗೆ ರೇಬೀಸ್‌ ಇದೆಯಾ ಅಂತ ಟೆಸ್ಟ್‌ ಮಾಡೋಕೆ ಅಬ್ಸರ್ವೇಷನ್‌ನಲ್ಲಿ ಇಟ್ಟಿದ್ದಾರೆ. ಆದ್ರೆ ರೇಬೀಸ್‌ ಟೆಸ್ಟ್‌ನ್ನ ಕೇವಲ ಸತ್ತ ನಾಯಿಯ ಮೇಲೆ ಮಾಡಿದ್ರೆ ಮಾತ್ರ ಆ ನಾಯಿಗೆ ಸೋಂಕು ತಗುಲಿದ್ಯಾ ಇಲ್ವಾ ಅಂತ ಖಚಿತವಾಗಿ ಹೇಳೋಕೆ ಸಾಧ್ಯ. ಯಾಕಂದ್ರೆ ಅದ್ರ ಬ್ರೈನ್‌ನ ಒಂದು ಪಾರ್ಟ್‌ನ್ನ ತೆಗೆದು ಟೆಸ್ಟ್‌ ಮಾಡಿ, ವೈರಸ್‌ ತಗುಲಿದ್ಯಾ ಇಲ್ವಾ ಅಂತ ಕನ್ಫರ್ಮ್‌ ಆಗಿ ಹೇಳಲಾಗುತ್ತೆ. ಆದ್ರೆ ಬದುಕಿರೋ ನಾಯಿಗೆ ರೇಬೀಸ್‌ ಇದೇಯಾ ಇಲ್ವಾ ಅಂತ ಟೆಸ್ಟ್‌ ಮಾಡಿದ್ರೆ ಖಚಿತವಾಗಿ ಹೇಳೋಕೆ ಆಗೋದಿಲ್ಲ ಅಂತ ಅಲ್ಲಿನ ಪಶು ವೈದ್ಯಕೀಯ ತಜ್ಞರೊಬ್ರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply